ಬೆಂಗಳೂರು ;- ಇಂಡಿಯಾ ಎಂಬ ಪದ ಬ್ರಿಟೀಷರದ್ದು, ಭಾರತ ಹೆಸರೇ ಸೂಕ್ತ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಇಂಡಿಯಾ ಎನ್ನುವ ಹೆಸರಿಗೆ ಯಾವ ಹಿನ್ನಲೆಯೂ ಇಲ್ಲ. ಇಂಡಸ್ ವ್ಯಾಲ್ಯೂ ಇರುವ ಕಾರಣಕ್ಕೆ ಇಂಡಿಯಾ ಎಂಬ ಹೆಸರು ಬಂದಿದೆ.
ಭಾರತ ಎಂದು ಉಚ್ಚಾರ ಮಾಡಲು ಬರದೇ ಇರುವ ಬ್ರಿಟೀಷರು ಕರೆದಿರುವ ಹೆಸರು ಅದು. ಅದಕ್ಕೆ ಮಹತ್ವ ಇಲ್ಲ ಎಂದು ಹೇಳಿದರು. ಬ್ರಿಟೀಷರು ಹಾಗೂ ಮೊಘಲರ ಕಾಲದಲ್ಲಿ ಪರಿವರ್ತನೆ ಆಗಿತ್ತು. ಅದನ್ನು ಸರಿಪಡಿಸುವುದರ ಕುರಿತು ಇಂದು ಚರ್ಚೆಯಾಗುತ್ತಿದೆ.
ಈಗಾಗಲೇ ಹಲವು ಊರಿನ ಹೆಸರು ಬದಲಾವಣೆ ಆಗಿದೆ. ಮದ್ರಾಸ್ ಈಗ ಚನ್ನೈ, ಬೆಂಗಳೂರ್ ಹೋಗಿ ಬೆಂಗಳೂರು, ಕೂರ್ಗ್ ಹೋಗಿ ಕೊಡಗು ಆಗಿದೆ ಎಂದು ತಿಳಿಸಿದರು. ನಾವು ಭಾರತ್ ಮಾತಾ ಕಿ ಜೈ ಎನ್ನುತ್ತೇವೆ ಹೊರತು, ಇಂಡಿಯಾ ಮಾತಾ ಕಿ ಜೈ ಎನ್ನುವುದಿಲ್ಲ. ಹಾಗಾಗಿ ಸರ್ಕಾರ ಹೆಸರು ಬದಲಾವಣೆ ಮಾಡುವುದು ಖಂಡಿತ ಒಳ್ಳೆಯದು
ಈ ದೇಶ ಪರದೇಶಿ ಅಲ್ಲ, ಧರ್ಮಛತ್ರ ಅಲ್ಲ. ನಮ್ಮ ಪರಂಪರೆಯಲ್ಲಿ ಬಂದಿರುವ ಹೆಸರು. ಭಾರತ ಎಂಬ ಹೆಸರನ್ನು ಇಟ್ಟರೆ ದೇಶದ ವಿಷಯದಲ್ಲಿ ಭಾವನೆಗಳು ಬೆಳೆಯುತ್ತವೆ ಎಂದರು.