ಖಾಸಗಿ ಆಸ್ಪತ್ರೆಯಲ್ಲಿ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಸಿಬ್ಬಂದಿ ಅರೆಸ್ಟ್

ಬೆಂಗಳೂರು ;- ಬೆಂಗಳೂರು ನಗರದ ಹೆಬ್ಬಾಳದಲ್ಲಿ ಘೋರ ಕೃತ್ಯವೊಂದು ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ವೃದ್ಧೆ ಮೇಲೆ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹೀಗಾಗಿ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಶೋಕ್ ಬಂಧಿತ ಆರೋಪಿ ಆಗಸ್ಟ್ 3 ರಂದು ವೃದ್ಧೆ ಹೆಬ್ಬಾಳದ ಅಸ್ಟರ್ ಸಿಎಂಐ ಆಸ್ಪತ್ರೆಗೆ ದಾಖಲಾಗಿದ್ದರು.

ಆಗಸ್ಟ್ 4 ಬೆಳಗಿನ ಜಾವ 1:30 ರ ವೇಳೆಗೆ ವೃದ್ದೆಯನ್ನು ಸಿಟಿ ಸ್ಕ್ಯಾನ್ ಮಾಡಲೆಂದು ಅಶೋಕ್ ಕರೆದೊಯ್ದಿದ್ದಾನೆ. ಅದರಂತೆ ಸಿಟಿ ಸ್ಕ್ಯಾನ್ ಮೆಷಿನ್ ಮೇಲೆ ಮಲಗಿಸಿ ವಿವಸ್ತ್ರಗೊಳಿಸಿದ್ದ ಅಶೋಕ್, ನಂತರ ವೃದ್ಧೆಯ ಖಾಸಗಿ ಅಂಗಾಗಳ ಸ್ಪರ್ಶಿಸಿ ಲೈಂಗಿಕ ದೌರ್ಜನ್ಯ ಎಸಗಿ ತನ್ನೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಪೀಡಿಸಿದ್ದಾನೆ.
ಈ ಬಗ್ಗೆ ಸಂತ್ರಸ್ಥೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಶೋಕ್ನನ್ನು ಬಂಧಿಸಿದ್ದಾರೆ.

Loading

Leave a Reply

Your email address will not be published. Required fields are marked *