ಬೆಂಗಳೂರು: ಲಿವಿಂಗ್ ಟು ಗೆದರ್ ನಲ್ಲಿ ಇದ್ದು ಪ್ರಿಯಕರನ ಕೊಂದ ಯುವತಿಯ ಬಂಧನವಾಗಿದೆ. ಬೆಳಗಾವಿ ಮೂಲದ ರೇಣುಕ (34) ಬಂಧಿತ ಆರೋಪಿಯಾಗಿದ್ದು ಆಗಸ್ಟ್ 5ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಗರದ ಹುಳಿಮಾವು ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ವೊಂದರಲ್ಲಿ ನಡೆದಿದ್ದ ಹತ್ಯೆಯಾಗಿದ್ದು ಕೇರಳ ಮೂಲದ ಜಾವೀದ್ (29) ಕೊಲೆಯಾದ ಯುವಕನಾಗಿರುತ್ತಾನೆ. ಮೊಬೈಲ್ ಸರ್ವಿಸ್ ಸೆಂಟರ್ ನಲ್ಲಿ ಕೆಲಸ ಮಾಡುತಿದ್ದ ಜಾವಿದ್ ಮಡಿವಾಳದ ಒಂದೇ ಏರಿಯಾದಲ್ಲಿ ವಾಸವಾಗಿದ್ದ ವೇಳೆ ಇಬ್ಬರಿಗೂ ಪರಿಚಯವಾಗು ಕೊನೆಗೆ ಪ್ರೀತಿಗೆ ತಿರುಗಿತ್ತು. ಕಳೆದ ಮೂರು ವರ್ಷದಿಂದ ಇಬ್ಬರ ನಡುವೆ ಪರಿಚಯವಾಗಿ ಸಲುಗೆ ಇತ್ತು..ಇದಾದ ಬಳಿಕ ಆಗಾಗ ಭೇಟಿ ಮಾಡುತಿದ್ದ ಇಬ್ಬರು..ಈ ವೇಳೆ ವಸತಿ ಗೃಹ ಅಥವ ಸರ್ವಿಸ್ ಅಪಾರ್ಟ್ಮೆಂಟ್ ನಲ್ಲಿ ಉಳಿದುಕೊಳ್ಳುತಿದ್ದರು.
ಹಾಗೆ ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಸಹ ನಡೆದಿತ್ತು ಕೊಲೆಯ ಮೂರು ದಿನದ ಹಿಂದೆ ಇಬ್ಬರು ಭೇಟಿಯಾಗಿದ್ದರು.. ಬಳಿಕ ಹುಳಿಮಾವಿನ ಅಕ್ಷಯಾನಗರದ ಸರ್ವಿಸ್ ಅಪಾರ್ಟ್ಮೆಂಟ್ ಗೆ ಬಂದಿದ್ದರು ಆಗ ಇಬ್ಬರ ನಡುವೆ ಜಗಳ ನಡೆದಿದ್ದು ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಎದೆಗೆ ಇರಿದಿದ್ದ ರೇಣುಕ ಆಮೆಲೆ ತನೆಗೆ ಏನೂ ಗೊತ್ತಿಲ್ಲದೆ ಹಾಗೆ ಇದ್ದಳು ಆಗಾಗ ಇಬ್ಬರ ನಡುವೆ ಪರಸ್ಪರ ಅನುಮಾನ ಪಟ್ಟು ಜಗಳವಾಡುತಿದ್ದರು ಆಗ ಚಾಕುವಿನಿಂದ ಇರಿದ ಬಳಿಕ ತಾನೇ ಅಪಾರ್ಟ್ಮೆಂಟ್ ನಿವಾಸಿಗಳ ಜೊತೆ ಆತನ ಆಸ್ಪತ್ರೆಗೆ ಸೇರಿಸಿದ್ದ ಯುವತಿ. ಆ ನಂತರ ಆತ ಆಸ್ಪತ್ರೆಯಲ್ಲಿ ದಾಖಲಾಗುತಿದ್ದಂತೆ ವಾಪಾಸ್ ಆಗಿದ್ದಳು.. ಬಳಿಕ ಅಪಾರ್ಟ್ಮೆಂಟ್ ಗೆ ಬಂದು ಅಲ್ಲಿಂದ ಪರಾರಿಗೆ ಯತ್ನಿಸಿದ್ದಳು. ಅನುಮಾನಗೊಂಡು ಈ ವೇಳೆ ಡೋರ್ ಲಾಕ್ ಮಾಡಿದ ಅಪಾರ್ಟ್ಮೆಂಟ್ ಸಿಬ್ಬಂದಿ ಬಳಿಕ ಹುಳಿಮಾವು ಪೊಲೀಸರಿಗೆ ಮಾಹಿತಿ ನೀಡಿದ್ದರು. ದೂರಿನ ಆಧಾರದ ಹಿನ್ನೆಲೆ ಈಗ ಹುಳಿಮಾವು ಪೊಲೀಸರ ಅತಿಥಿಯಾಗಿದ್ದಾಳೆ