ಟೀಂ ಇಂಡಿಯಾಗೆ10 ವಿಕೆಟ್‌ಗಳ ಭರ್ಜರಿ ಗೆಲುವು

ಲ್ಲೆಕೆಲೆ: ನಾಯಕ ರೋಹಿತ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ ಅವರ ಅಜೇಯ ಅರ್ಧಶತಕದ ಆಟದಿಂದ ಏಷ್ಯಾ ಕಪ್‌ ಕ್ರಿಕೆಟ್‌ (Asia Cup Cricket) ಟೂರ್ನಿಯಲ್ಲಿ ನೇಪಾಳ (Nepal) ವಿರುದ್ಧ ಟೀಂ ಇಂಡಿಯಾ (Team India) 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಸೂಪರ್‌ 4 ಪ್ರವೇಶಿಸಿದೆ.

ಟಾಸ್‌ ಸೋತು ಬ್ಯಾಟಿಂಗ್‌ ನಡೆಸಿದ ನೇಪಾಳ 48.2 ಓವರ್‌ನಲ್ಲಿ 230 ರನ್‌ಗಳಿಗೆ ಆಲೌಟ್‌ ಆಯ್ತು. ನಂತರ ಬ್ಯಾಟಿಂಗ್‌ ಆರಂಭಿಸಿದ ಭಾರತ 2.1 ಓವರ್‌ಗಳಲ್ಲಿ 17 ರನ್‌ ಗಳಿಸಿದ್ದಾಗ ಜೋರಾಗಿ ಮಳೆ (Rain) ಸುರಿಯಿತು.

ಮಳೆ ನಿಂತ ಮೇಲೆ ಭಾರತಕ್ಕೆ ಡಕ್‌ವರ್ಥ್‌ಲೂಯಿಸ್‌ ನಿಯಮದ ಅನ್ವಯ 23 ಓವರ್‌ಗಳಲ್ಲಿ 145 ರನ್‌ ಗುರಿ ನೀಡಲಾಯಿತು. ಸುಲಭದ ಗುರಿಯನ್ನು ಬೆನ್ನತ್ತಿದ ಭಾರತ ಆರಂಭಿಕ ಆಟಗಾರರಾದ ರೋಹಿತ್‌ ಶರ್ಮಾ (Rohith Sharma) ಮತ್ತು ಶುಭಮನ್‌ ಗಿಲ್‌ (Shubman Gill) ಶತಕದ ಜೊತೆಯಾಟವಾಡಿದ ಪರಿಣಾಮ 20.1 ಓವರ್‌ನಲ್ಲಿ 147 ನ್‌ ಹೊಡೆದು ಜಯಗಳಿಸಿತು. ರೋಹಿತ್‌ ಶರ್ಮಾ ಔಟಾಗದೇ 74 ರನ್‌(59 ಎಸೆತ, 6 ಬೌಂಡರಿ, 5 ಸಿಕ್ಸರ್‌), ಶುಭಮನ್‌ ಗಿಲ್‌ ಔಟಾಗದೇ 67 ರನ್‌(62 ಎಸೆತ, 8 ಬೌಂಡರಿ, 1 ಸಿಕ್ಸ್‌) ಹೊಡೆದರು.

ಇದಕ್ಕೂ ಮೊದಲು ಬ್ಯಾಟ್‌ ಮಾಡಿದ ನೇಪಾಳ ಪರ ಆರಂಭಿಕ ಆಟಗಾರರಾದ ಕುಶಾಲ್ ಭುರ್ಟೆಲ್ 38 ರನ್‌(25 ಎಸೆತ, 3 ಬೌಂಡರಿ, 2 ಸಿಕ್ಸ್‌), ಅಸೀಫ್‌ ಶೇಕ್‌ 58 ರನ್‌(97 ಎಸೆತ, 8 ಬೌಂಡರಿ) ಹೊಡೆದರೆ ಸೋಂಪಾಲ್ ಕಾಮಿ 48 ರನ್‌( 56 ಎಸೆತ, 1 ಬೌಂಡರಿ, 2 ಸಿಕ್ಸರ್‌) ಚಚ್ಚಿ ಔಟಾದರು.

ಮೊಹಮ್ಮದ್‌ ಸಿರಾಜ್‌ ಮತ್ತು ಜಡೇಜಾ ತಲಾ 3 ವಿಕೆಟ್‌ ಕಿತ್ತರೆ, ಶಮಿ, ಹಾರ್ದಿಕ್‌ ಪಾಂಡ್ಯ, ಶಾರ್ದೂಲ್‌ ಠಾಕೂರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Loading

Leave a Reply

Your email address will not be published. Required fields are marked *