ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಎಷ್ಟರ ಮಟ್ಟಿಗೆ ಅಂದ್ರೆ ಯಾವ ರೀತಿ ಬಂದೂ ಹೇಗೆ ಕಳ್ಳತತನ ಮಾಡ್ತಾರೇ ಅನ್ನೋದೆ ಒಂಥರ ಪೊಲೀಸರಗೇ ನಿಗೂಡವಾಗಿಬಿಟ್ಟಿತ್ತು ಆದರೂ ಪೊಲೀಸರು ಬಿಡುತ್ತಾರೆಯೇ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.ಸಂಜಯನಗರದ ಪಟೇಲಪ್ಪ ಲೇಔಟ್ ನಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುಬ್ರತೋಮಂಡಲ್ ಬಂಧಿತ ಆರೋಪಿಯಾಗಿದ್ದಾನೆ. ಆಗಸ್ಟ್ 27 ರಂದು ಮಧ್ಯಾಹ್ನ ನಡೆದಿದ್ದ ಘಟನೆ, ತಡವಾಗಿ ಬೆಳಕಿಗೆ ಬಂದಿದೆ.
ಸ್ನೇಹಿತನ ಮನೆಗೆ ದೇವರ ಪೂಜೆಗೆ ತೆರಳಿದ್ದ ಮನೆ ಮಾಲೀಕರು ಈ ವೇಳೆ ಮನೆ ಡೋರ್ ಮುರಿದು ಒಳಗೆ ಹೋಗಿದ್ದ ಕಳ್ಳ ಮನೆಯಲ್ಲಿದ್ದ 211 ಗ್ರಾಂ ಚಿನ್ನ,2 ಲಕ್ಷ ನಗದು ಹಣ ಕಳ್ಳತನ ಮಾಡಿದ್ದನು. ಮನೆ ಮಾಲೀಕರು ಪೂಜೆ ಮುಗಿಸಿ ವಾಪಸ್ ಬಂದಾಗ ಅವರಿಗೆ ಕಾದಿತ್ತು ಶಾಕ್ ಆ ನಂತರ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ಆರೋಪಿಯನ್ನು ಬಂಧಿಸಿ 211 ಗ್ರಾಂ ಚಿನ್ನ 75 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.