ಬೆಂಗಳೂರು: ದೇಶದಲ್ಲಿ ಇರೋದು ಒಂದೇ ಭೂಮಿ, ಅದು ಹಿಂದೂಗಳ ಭೂಮಿ. ಸನಾತನ ಧರ್ಮ ನಮ್ಮ ರಕ್ತದ ಕಣ ಕಣದಲ್ಲಿ ಬಂದಿದೆ ಎಂದು ಮಾಜಿ ಸಚಿವ ಆರ್.ಅಶೋಕ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಉದಯ ನಿಧಿ ಸ್ಟಾಲಿನ್ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತಾಡಿದ್ದಾರೆ. ದೇಶದಲ್ಲಿ ಇರೋದು ಒಂದೇ ಭೂಮಿ, ಅದು ಹಿಂದೂಗಳ ಭೂಮಿ. ಸನಾತನ ಧರ್ಮ ನಮ್ಮ ರಕ್ತದ ಕಣ ಕಣದಲ್ಲಿ ಬಂದಿದೆ. ಅವರು ಇಂಡಿಯಾ ಮೈತ್ರಿಕೂಟದ ಹಿಡನ್ ಅಜೆಂಡಾ ಹೇಳಿದ್ದಾರೆ. ಇದರ ಬಗ್ಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹೇಳಬೇಕು. ಇವರು ದೇವಸ್ಥಾನಕ್ಕೆ ಹೋಗಿ ನಾಮ ಹಾಕಿಕೊಂಡು ಬರುತ್ತಾರೆ. ನಾನು ಹಿಂದೂ ಹಿಂದೂ ಅಂತ ಹೇಳಿ ಆಮೇಲೆ ಹಿಂದೂಗಳಿಗೆ ಬೈಯ್ಯುತ್ತಾರೆ. ಇದು ಕಾಂಗ್ರೆಸ್ ನಾಯಕರ ಚಾಳಿಯಾಗಿದೆ. ಇವನು ಹುಚ್ಚನ ರೀತಿ ಮಾತಾಡುತ್ತಿದ್ದಾನೆ. ಇವನು ಮೊದಲು ಹಿಂದುವೋ ಅಲ್ವೋ ಎನ್ನುವುದನ್ನು ಹೇಳಲಿ. ಹಿಂದೂಗಳ ಭಾವನೆಗೆ ಕೊಡಲಿ ಪೆಟ್ಟನ್ನು ದೇಶದ ಜನರು ಕ್ಷಮಿಸುವುದಿಲ್ಲ ಎಂದರು.