ಶ್ರೀಹರಿಕೋಟಾ: ಇಂದು ಬೆಳಗ್ಗೆ 11.50ಕ್ಕೆ ಆಂಧ್ರಪ್ರದೇಶದ (Andhrapradesh) ಶ್ರೀಹರಿಕೋಟಾದಿಂದ (Sriharikota) ಸೂರ್ಯ ಶಿಕಾರಿಗೆ ಹೊರಟ ಆದಿತ್ಯ ಎಲ್ 1 (Aditya L1) ಮಿಷನ್ ಯಶಸ್ವಿಯಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದ್ದಾರೆ. ಮಿಷನ್ ಯಶಸ್ವಿ ಬಗ್ಗೆ ಘೋಷಣೆ ಮಾಡಿದ ಅವರು, ಯಶಸ್ವಿಯಾಗಿ ಆದಿತ್ಯ ಎಲ್1 ಆರ್ಬಿಟ್ ಗೆ ಇನ್ ಸರ್ಟ್ ಮಾಡಲಾಗಿದೆ ಎಂದರು. ಇದೇ ವೇಳೆ ಆದಿತ್ಯ ಐ1 ಟೀಂಗೆ ಸೋಮನಾಥ್ (S Somanath) ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಂದ್ರಯಾನದ (Chandrayaan-3) ಬಗ್ಗೆ ಮಾಹಿತಿ ನೀಡಿದ ಸೋಮನಾಥ್, ಚಂದ್ರಯಾನದ ಲ್ಯಾಂಡರ್, ರೋವರ್ ಇನ್ನೂ ಯಶಸ್ವಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿವೆ. ಗುಡ್ ನ್ಯೂಸ್ ಅಂದ್ರೆ ರೋವರ್ 100 ಮೀಟರ್ ವರೆಗೂ ಸಂಚಾರ ಮಾಡಿದೆ. ಚಂದ್ರಯಾನದ ಅಧ್ಯಯನ ಯಶಸ್ವಿಯಾಗಿ ಮುಂದುವರಿದಿದೆ ಎಂದರು. ಇತ್ತ ಸಚಿವ ಜೀತೇಂದ್ರ ಸಿಂಗ್ ಅವರು ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.