ಕಲಬುರಗಿ: ಕಾಂಗ್ರೆಸ್ ಆಡಳಿತದಲ್ಲಿ ಶೇ.50 ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಎಲ್ಲಿ ನೋಡಿದರೂ ಬರೀ ಭ್ರಷ್ಟಾಚಾರ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿಧಾನ ಸೌಧದ ಕೆಳ ಮಹಡಿಯಿಂದ ಮೂರನೇ ಮಹಡಿವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವಿಧಾನ ಸೌಧದ ಗೋಡೆ ಗೋಡೆಗಳಲ್ಲಿ, ಕಂಬ ಕಂಬಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಸಿಎಂ, ಮಂತ್ರಿಗಳು ಮತ್ತು ಶಾಸಕರ ನಡುವೆ ಹೊಂದಾಣಿಕೆ ಇಲ್ಲ. ನಮ್ಮ ಪಕ್ಷದಿಂದ ಯಾರೂ ಕಾಂಗ್ರೆಸ್ಗೆ ಹೋಗೋದಿಲ್ಲ. ಭ್ರಷ್ಟಾಚಾರ ಹೊರಗೆ ಬರಬಾರದು ಅಂತ ಜನರ ದಿಕ್ಕು ತಪ್ಪಿಸಲು ಆಪರೇಷನ್ ಹಸ್ತ ಎನ್ನುವ ಸುಳ್ಳು ಸುದ್ದಿ ಸೃಷ್ಟಿಸುತ್ತಿದ್ದಾರೆ. ಕಾಂಗ್ರೆಸ್ ಸಣ್ಣ ಪುಟ್ಟ ಪಕ್ಷಗಳನ್ನು ಸೇರಿಸಿಕೊಂಡು ಕಂಪೆನಿ ಮಾಡಿಕೊಂಡಿದೆ. ಕಾಂಗ್ರೆಸ್ ಹಣೆ ಬರಹ ಚನ್ನಾಗಿಲ್ಲ. ಈ ಬಾರಿಯೂ ಮೋದಿ ಪ್ರಧಾನಿ ಆಗುವುದು ಖಚಿತ ಎಂದರು.