ಮಂಡ್ಯ : ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ ಎಂದು ಕಾವೇರಿ ವಿಚಾರದಲ್ಲಿ ಧ್ವನಿ ಎತ್ತದ್ದಕ್ಕೆ ಮೇಲುಕೋಟೆ ಶಾಸಕ ಬೇಸರ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಕೆ.ಆರ್.ಎಸ್ ನ ಅಹೋರಾತ್ರಿ ಧರಣಿಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದರು. ಕಾವೇರಿ ಹೋರಾಟದಲ್ಲಿ ಸ್ಯಾಂಡಲ್ ವುಡ್ ನಟರು ಸೇರಿ ಎಲ್ಲರೂ ಧ್ವನಿ ಎತ್ತಬೇಕು.ಕೆ.ಆರ್.ಎಸ್ ಡ್ಯಾಂನಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆ ಇದೆ. ನಟ, ನಟಿಯರು ಅಷ್ಟೇ ಅಲ್ಲ ಬೆಂಗಳೂರಿನ 80% ಜನ ಕಾವೇರಿ ನೀರು ಕುಡಿಯುತ್ತಾರೆ. ಆದ್ದರಿಂದ ಸ್ಯಾಂಡಲ್ ವುಡ್ ಸೇರಿ ಎಲ್ಲರೂ ಧ್ವನಿ ಎತ್ತಬೇಕೆಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಗ್ರಹಿಸಿದ್ದಾರೆ.
ಕಾವೇರಿ ನದಿ ನೀರು ವಿಚಾರದಲ್ಲಿ ನಮಗೆ ಪದೇ ಪದೇ ಅನ್ಯಾಯವಾಗುತ್ತಿದೆ. ಸುಪ್ರೀಂ ಕೋರ್ಟ್ ನಲ್ಲಿ ಏನಾಗುತ್ತೆ ಎಂದು ನೋಡಬೇಕು. ಈಗಾಗಲೇ ಹಿರಿಯ ವಕೀಲರೊಂದಿಗೆ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಚರ್ಚೆ ನಡೆಸಿದ್ದಾರೆ. ಸುಪ್ರೀಂಕೋರ್ಟ್ ಮುಂದೆ ವಾಸ್ತವ ಅಂಶದ ಬಗ್ಗೆ ವಾದ ಹೇಗೆ ಮಾಡುತ್ತಾರೆ ಎಂದು ಎದುರು ನೋಡುತ್ತಿರುವುದಾಗಿ ತಿಳಿಸಿದರು.