ರಾಯಚೂರು ಬಳಿ ವೈದ್ಯನ ಕಾರಿನ ಮೇಲೆ ಗುಂಡಿನ ದಾಳಿ!

ರಾಯಚೂರು: ಗುಂಡಿನ ದಾಳಿ ನಡೆಸಿ ಕಾರಿನಲ್ಲಿ ತೆರಳುತ್ತಿದ್ದ ವೈದ್ಯನ ಹತ್ಯೆಗೆ ಯತ್ನಿಸಿರುವಂತಹ ಘಟನೆ ರಾಯಚೂರು ಹೊರವಲಯದ ಸಾತ್‌ ಮೈಲ್‌ ಬಳಿ ನಡೆದಿದೆ. ರಾಯಚೂರಿನ ಬೆಟ್ಟದೂರು ಆಸ್ಪತ್ರೆಯ ವೈದ್ಯ ಜಯಪ್ರಕಾಶ್​ ಹತ್ಯೆಗೆ ಯತ್ನಿಸಲಾಗಿದೆ. ಕಾರು ಅಡ್ಡಗಟ್ಟಿ ಬೈಕ್‌ನಲ್ಲಿ ಬಂದಿದ್ದ ಇಬ್ಬರಿಂದ ಗುಂಡಿನ ದಾಳಿ ಮಾಡಿದ್ದು,

ಒಂದು ಸುತ್ತು ಫೈರ್ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಕಾರಿನ ಬ್ಯಾನಟ್‌ಗೆ ಗುಂಡು ತಗುಲಿದ್ದರಿಂದ ಅದೃಷ್ಟವಶಾತ್‌ ವೈದ್ಯ ಜಯಪ್ರಕಾಶ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಯಚೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

Loading

Leave a Reply

Your email address will not be published. Required fields are marked *