ನಿಮ್ಮ ಉತ್ಸಾಹ ಹಾಗೂ ಪರಿಶ್ರಮವನ್ನ ನಿರೂಪಿಸಿದ್ದೀರಿ: ಮೋದಿ ಭೇಟಿ ಮಾಡಿದ ಪ್ರಜ್ಞಾನಂದ

ಅಜರ್​​ಬೈಜಾನ್​​ನ ಬಾಕುವಿನಲ್ಲಿ ನಡೆದ ಚೆಸ್​​ ವಿಶ್ವಕಪ್-2023 ಫೈನಲ್‌ನ (Chess World Cup Final 2023) ಟೈ ಬ್ರೇಕರ್​​ನಲ್ಲಿ ಅಮೋಘ ಪ್ರದರ್ಶನದ ಹೊರತಾಗಿಯೂ ವಿರೋಚಿತ ಸೋಲನುಭವಿಸಿದ ಚೆಸ್‌ ಯುವ ಗ್ರ್ಯಾಂಡ್​ ಮಾಸ್ಟರ್​ ಭಾರತದ ಆರ್​.ಪ್ರಜ್ಞಾನಂದ (Praggnanandhaa) ಅವರನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದಿಸಿದ್ದಾರೆ.

ಪ್ರಜ್ಞಾನಂದಗೆ ವಿಶೇಷ ಸಂದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಪ್ರಜ್ಞಾನಂದ ಕುಟುಂಬವನ್ನ ಭೇಟಿ ಮಾಡಿದ ಪ್ರಧಾನಿ ಮೋದಿ, ಕುಟುಂಬದೊಂದಿಗೆ ನಿಮ್ಮನ್ನ ಭೇಟಿಯಾಗಿದ್ದು ತುಂಬಾ ಖುಷಿಯಾಯಿತು. ನಿಮ್ಮ ಉತ್ಸಾಹ ಹಾಗೂ ಪರಿಶ್ರಮವನ್ನ ನಿರೂಪಿಸಿದ್ದೀರಿ, ಭಾರತದ ಯುವಕರು ಎಲ್ಲಿ ಬೇಕಾದ್ರೂ ಜಯಿಸುತ್ತಾರೆ ಎಂಬುದಕ್ಕೆ ನೀವು ಮಾದರಿಯಾಗಿದ್ದೀರಿ,

ನಿಮ್ಮ ಮೇಲೆ ಸಾಕಷ್ಟು ಹೆಮ್ಮೆಯಿದೆ ಎಂದು ಶ್ಲಾಘಿಸಿದ್ದಾರೆ. ಪ್ರಜ್ಞಾನಂದ ಸಹ ಪ್ರಧಾನಿ ಮೋದಿ ಪ್ರತಿಕ್ರಿಯೆಗೆ ಧನ್ಯವಾದ ಸಲ್ಲಿಸಿದ್ದಾರೆ. ಇತ್ತೀಚೆಗೆ ನಡೆದ ಚೆಸ್ ವಿಶ್ವಕಪ್​ನ ಫೈನಲ್ ಟೈ ಬ್ರೇಕರ್‌ನ 2ನೇ ಸುತ್ತಿನಲ್ಲಿ 5 ಬಾರಿ ವಿಶ್ವ ಚಾಂಪಿಯನ್‌ ಆಗಿದ್ದ ಮ್ಯಾಗ್ನಸ್ ಕಾರ್ಲ್‌ಸನ್ ಗೆಲುವು ಸಾಧಿಸಿ 6ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದರು. ಭಾರತೀಯ ಚೆಸ್‌ ಪಟು ಪ್ರಜ್ಞಾನಂದ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರು.

Loading

Leave a Reply

Your email address will not be published. Required fields are marked *