ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಎನ್ನುವುದು ಎಡಬಿಡಂಗಿ ಯೋಜನೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಎಸ್ ಟಿ ಸೋಮಶೇಖರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ದೊಡ್ಡ ದೊಡ್ಡವರು ಏನಾದರೂ ಮಾತಾಡಲಿ ಇದು ಸರ್ಕಾರದ ಯೋಜನೆ, ಜನರಿಗೆ ಹಣ ಸಿಗುತ್ತದೆ ಇದರಲ್ಲಿ ಯಾವುದೇ ನ್ಯೂನತೆ ಕಾಣುತ್ತಿಲ್ಲ ಯೋಜನೆ ಅನುಷ್ಠಾನಕ್ಕೆ ಏನು ಬೇಕೊ ಅದನ್ನು ಮಾಡುತ್ತಿದ್ದೇನೆ ನಮಗೆ ಯೋಜನೆ ಸಿಕ್ಕಿಲ್ಲ ಎಂದು ಜನ ಕೇಳಿದರೆ ಏನು ಮಾಡುವುದು? ಸರ್ಕಾರದ ಯೋಜನೆಯನ್ನು ತಲುಪಿಸುವುದಕ್ಕಷ್ಟೇ ನಾನು ಸೀಮಿತ ಆಗಿದ್ದೇನೆ ಎಂದು ST ಸೋಮಶೇಖರ್ ಅವರು ತಿಳಿಸಿದ್ದಾರೆ.
ಹಾಗೆ ಎಲ್ಲರೂ ನನ್ನ ಆಪ್ತರೇ, ನನಗೆ ಯಾವುದೇ ರೀತಿಯಲ್ಲಿ ಪಕ್ಷ ಭೇದ ಇಲ್ಲ ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹೇಳಿದರು. ಬಿಜೆಪಿ ತೊರೆಯುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಈ ರೀತಿಯಲ್ಲಿ ಉತ್ತರಿಸಿದರು. ಲೋಕಸಭಾ ಚುನಾವಣೆಗೂ ನಾನು ತಯಾರಿ ಮಾಡುತ್ತಿಲ್ಲ. ಸರ್ಕಾರದ ಯೋಜನೆಗಳನ್ನು ತಲುಪಿಸುವುದಕ್ಕಷ್ಟೇ ನಾನು ಸೀಮಿತ ಆಗಿದ್ದೇನೆ. ತಾಲ್ಲೂಕು ಪಂಚಾಯತ್, ಎಂಎಲ್ ಎ, ಎಂಪಿ ಚುನಾವಣೆ ಸಂದರ್ಭದಲ್ಲಿ ಇಲ್ಲಿಯವರು ಅಲ್ಲಿ, ಅಲ್ಲಿಯವರು ಇಲ್ಲಿ ಪಕ್ಷಾಂತರ ಸಹಜ. ಸಾವಿರಾರು ಜನ ನಾಯಕರು ಇನ್ನೂ ನನ್ನ ಜೊತೆ ಇದ್ದಾರೆ. ಏನಾದರೂ ಹೆಚ್ಚು ಕಡಿಮೆ ಆದರೆ ಅವರು ಐದು ವರ್ಷ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.ಕೆಟಗರಿ ಮತ್ತಿತರ ಸಮಸ್ಯೆಗಳು ಇರುವವರು ಹೋಗಿದ್ದಾರೆ. ಅದು ತಪ್ಪು ಅಂತಾ ಹೇಳಲು ಹೋಗಲ್ಲ’ ಎಂದರು.