ನಾಲ್ಕು ಮಂದಿ ಅಪರಿಚಿತರಿಂದ ಯುವ ವಿಜ್ಞಾನಿ ಮೇಲೆ ಹಲ್ಲೆಗೆ ಯತ್ನ

ಬೆಂಗಳೂರು: ನಾಲ್ಕು ಮಂದಿ ಅಪರಿಚಿತರಿಂದ ಇಸ್ರೋ ಯುವ ವಿಜ್ಞಾನಿಯ ಕಾರನ್ನು ಹಿಂಬಾಲಿಸಿ ಕಲ್ಲೆಸೆದ ಘಟನೆ ಸಿಲಿಕಾನ್‌ ಸಿಟಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರತನಹಳ್ಳಿ ಮುಖ್ಯ ರಸ್ತೆಯಲ್ಲಿ ಆಗಸ್ಟ್‌ 24ರ ರಾತ್ರಿ 12:45ರ ವೇಳೆಗೆ ಮನೆಗೆ ತೆರಳುತ್ತಿದ್ದಾಗ ಗೂಂಡಾಗಳು ವಿಜ್ಞಾನಿ ಅಶುತೋಷ್ ಸಿಂಗ್ ಅವರ ಕಾರನ್ನು ಹಿಂಬಾಲಿಸಿದ್ದಾರೆ.

ಗೂಂಡಾಗಳು ಕಾರನ್ನು ತಡೆದು ನಿಲ್ಲಿಸಿ ಹಿಂಭಾಗದ ಗಾಜನ್ನು ಒಡೆದು ಹಾಕಿದ್ದಾರೆ.

ಈ ಘಟನೆಯ ಬಗ್ಗೆ ದೂರು ನೀಡಲು ಮುಂದಾದಾಗ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಎಕ್ಸ್‌ ಮೂಲಕ ಘಟನೆ ಹಂಚಿಕೊಂಡಿದ್ದಾರೆ. ಬಳಿಕ ಎಚ್ಚೆತ್ತ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

Loading

Leave a Reply

Your email address will not be published. Required fields are marked *