ನಟಿ ಅದ್ವಿತಿ ಶೆಟ್ಟಿ ತಂದೆ ನಿಧನರಾಗಿದ್ದಾರೆ. ತಂದೆಯನ್ನು ಕಳೆದುಕೊಂಡ ನೋವಿನಲ್ಲಿ ನಟಿ ಪೋಸ್ಟ್ ಶೇರ್ ಮಾಡಿದ್ದಾರೆ.
ಅದ್ವಿತಿ ಶೆಟ್ಟಿ (Adhvithi Shetty) ಅವರ ತಂದೆ (Father) ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅದ್ವಿತಿ ತಂದೆಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಇದೀಗ ಅದ್ವಿತಿ ಶೆಟ್ಟಿ ತಂದೆಗೆ ವಿಧಿವಶರಾಗಿದ್ದಾರೆ. ತಂದೆಯ ನಿಧನದ ಬಗ್ಗೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ.
ಅದ್ವಿತಿ– ಅಶ್ವಿತಿ ಶೆಟ್ಟಿ ಇಬ್ಬರು ಟ್ವಿನ್ಸ್ ಮಕ್ಕಳ ವೃತ್ತಿ ರಂಗದ ಗೆಲುವಿಗೆ ತಂದೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ತಂದೆ ನಿಧನ ಇದೀಗ ನಟಿ ಅದ್ವಿತಿ ಕುಟುಂಬಕ್ಕೆ ಶಾಕ್ ಕೊಟ್ಟಿದೆ. ಅದ್ವಿತಿ ತಂದೆಯ ನಿಧನಕ್ಕೆ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.