ಬೆಂಗಳೂರು: ಆಪರೇಷನ್ ಹಸ್ತಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಖುದ್ದು ಎಂಟ್ರಿಕೊಟ್ಟರಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಡಿಕೆ ಶಿವಕುಮಾರ್ ಅವರು ಜನರ ಅಹವಾಲು ಆಲಿಸುವ ನೆಪದಲ್ಲಿ ಮೂರನೇ ಬಾರಿಗೆ ಯಶವಂತಪುರ ಕ್ಷೇತ್ರಕ್ಕೆ ಹೋಗಿದ್ದಾರೆ. ನಿನ್ನೆ (ಆ.26) ಕನಕಪುರ ರಸ್ತೆಯ ಅಪಾರ್ಟ್ಮೆಂಟ್ ನಿವಾಸಿಗಳ ಅಹವಾಲು ಆಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಬಿಜೆಪಿಗರ ಮೇಲಿನ ಬೇಸರ ಹೊರಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ತನಗೆ ಬಿಜೆಪಿ ನಾಯಕರು ಆಹ್ವಾನವನ್ನೇ ನೀಡಲಿಲ್ಲ ಎಂದಿದ್ದಾರೆ.