ಬೆಂಗಳೂರು: ತಾನು ಪ್ರೀತಿ ಮಾಡುತ್ತಿದ್ದ ಯುವತಿಯನ್ನೇ ಬಾಯ್ ಫ್ರೆಂಡ್ ಕುಕ್ಕರ್ ನಿಂದ ಹಲ್ಲೆ ಮಾಡಿ ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಮೈಕೋಲೇಟ್ ನಲ್ಲಿ ತಡರಾತ್ರಿ ನಡೆದಿದೆ ಕೇರಳ ಮೂಲದ ದೇವಾ (24 ) ಹತ್ಯೆಯಾದ ಯುವತಿ. ವೈಷ್ಣವ್ (24) ಹತ್ಯೆ ಮಾಡಿದ ಆರೋಪಿ ಎನ್ನಲಾಗಿದೆ.ಇನ್ನು ಈ ಜೋಡಿ ಲಿವಿಂಗ್ ಟುಗೇದರ್ ನಲ್ಲಿದ್ದ ಇಬ್ಬರು ಬೇಗೂರು ನ್ಯೂ ಮೈಕೋ ಲೇಔಟ್ ಸಮೀಪದ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದರು.ಇನ್ನೂ ಆನ್ಲೈನ್ ಮೂಲಕ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು .
ಸದ್ಯ ಪೊಲೀಸ್ ಮಾಹಿತಿ ಪ್ರಕಾರ ಇನ್ನು ದೇವಾ ಮತ್ತು ವೈಷ್ಣವ್ ಕಾಲೇಜು ದಿನಗಳಿಂದ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರು.. ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು ಅಂತೆ ಕಳೆದ ಹತ್ತು ದಿನಗಳ ಹಿಂದೆ ವೈಷ್ಣವ್ ಜೊತೆ ಲೀವಿಂಗ್ ಟುಗೆದರ್ ರಿಲೇಷನ್ಶಿಪ್ ನಲ್ಲಿದ್ದ ದೇವಾ ಮೇಲೆ ನೀನು ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದೀಯ ಅಂತಲ್ಲ ಮಾತಾಡ್ತಿದ್ನಂತೆ ಪದೇ ಪದೇ ಅಕೆ ಶೀಲದ ಮೇಲೆ ಅನುಮಾನ ಪಡುತ್ತಿದ್ದಂತೆ ಹಾಗಾಗಿ ಇದೆ ವಿಚಾರಕ್ಕೆ ಜಗಳ ಶುರುವಾಗಿದೆ ಜಗಳ ವಿಕೋಪಕ್ಕೆ ತಿರುಗಿ ಮಧ್ಯಾಹ್ನ ಕುಕ್ಕರ್ ನಿಂದ ಹಲ್ಲೆ ಮಾಡಿದ್ದಾನೆ ಕುಕ್ಕರ್ ನಿಂದ ತಲೆಗೆ ಹಲ್ಲೆ ಮಾಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಇನ್ನು ಕೊಲೆ ಮಾಡಿದ ಬಳಿಕ ರೂಮ್ನಲ್ಲಿ ವೈಷ್ಣವ್ ವಾಸವಾಗಿದ್ದಂತೆ ಅಲ್ಲಿನ ಸ್ಥಳಿಯರು ಕಂಟ್ರೋಲ್ ರೂಮ್ಗೆ ಮಾಹಿತಿ ಕೊಟ್ಟಿದ್ದಾರೆ ಇನ್ನು ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಆರೋಪಿ ವೈಷ್ಣವ ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ . ಅ ಮೃತ ದೇವಾಳ ಕುಟುಂಬಕ್ಕೆ ಮಾಹಿತಿ ನೀಡಿದ್ದು ಮೃತ ದೇಹವನ್ನು ಶವಗಾರಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಬೀಗುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..