ಬೆಂಗಳೂರು: ಅಂತಾರಾಷ್ಟ್ರಿಯ ಮಟ್ಟದ ಕ್ರಿಮಿನಲ್ಗಳನ್ನ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೂವರು ವಿದೇಶಿ ಪ್ರಜೆಗಳು, ಆಶ್ರಯ ನೀಡಿದ್ದವನ ಬಂಧಿಸಲಾಗಿದೆ. ಶ್ರೀಲಂಕಾದ ಕಾಸಿನ್ ಕುಮಾರ್, ಅಮಿಲಾ ನುವಾನ್, ರಂಗ ಪ್ರಸಾದ್ ಹಾಗೂ ಬೆಂಗಳೂರಿನ ಜೈ ಪರಮೇಶ್ ಅಲಿಯಾಸ್ ಜಾಕ್ ಬಂಧಿತರು. ಪಾತಕಿ ಕಾಸಿನ್ ಕುಮಾರ್ ವಿರುದ್ಧ ಶ್ರೀಲಂಕಾದಲ್ಲಿ 4 ಕೊಲೆ ಪ್ರಕರಣ, ಮತ್ತೊಬ್ಬ ಪಾತಕಿ ಅಮಿಲಾ ನುವಾನ್ ಮೇಲೆ 5 ಕೊಲೆ ಕೇಸ್ಗಳಿವೆ. ರಂಗ ಪ್ರಸಾದ್ ವಿರುದ್ಧ ಹಲ್ಲೆ, ಕೊಲೆ ಕೇಸ್ ಇರುವ ಬಗ್ಗೆ ಮಾಹಿತಿ ಇದೆ. ಆರೋಪಿಗಳ ಬಳಿ 13 ಮೊಬೈಲ್, ಶ್ರೀಲಂಕಾದ ವಿವಿಧ ವಿಸಿಟಿಂಗ್ ಕಾರ್ಡ್, ಬಸ್ ಟಿಕೆಟ್, ಪೇಪರ್ ಕಟ್ಟಿಂಗ್ಸ್, ರೆಂಟಲ್ ಅಗ್ರಿಮೆಂಟ್ ಪ್ರತಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯ ಜೆರಾಕ್ಸ್ ಪತ್ತೆಯಾಗಿದೆ.