ಮಂಗಳೂರಿನ ಜಿಲ್ಲಾ ಆಸ್ಪತ್ರೆ ವೆನ್ಲಾಕ್‌ನಲ್ಲಿ 119 ಮಂದಿ ಡಯಾಲಿಸಿಸ್ ಗೆ ನೋಂದಾಯಿತ ಕಿಡ್ನಿ ರೋಗಿಗಳಿದ್ದಾರೆ. ಆದರೆ ಇಲ್ಲಿರುವ 23 ಯಂತ್ರಗಳಲ್ಲಿ ಕೇವಲ 14 ಮಾತ್ರ ಕಾರ್ಯನಿರ್ವಹಿಸುತ್ತಿದ್ದು , ಕೆಟ್ಟು ನಿಂತಿರುವ 9 ಯಂತ್ರಗಳನ್ನು ಇನ್ನೂ ರಿಪೇರಿ ಮಾಡಿಲ್ಲ. ಕಾರಣ ನಿರ್ವಹಣೆ ಮಾಡಲು ಇರುವ ಎಸ್ಕಾಗ್ ಸಂಜೀವಿನಿ ಸಂಸ್ಥೆಯ ಟೆಂಡರ್ ಮುಗಿದಿದೆ. ಸರ್ಕಾರ ಹೊಸ ಟೆಂಡರ್ ಕರೆದಿದ್ದರೂ, ಇನ್ನೂ ಪ್ರಕ್ರಿಯೆ ಪೂರ್ಣಗೊಳ್ಳದೆ, ಅಲ್ಲಿಯವರೆಗೆ ರೋಗಿಗಳು ನರಳಾಡುವ ಪರಿಸ್ಥಿತಿ ಇದೆ.