ದಾವಣಗೆರೆ ಮೂಲದ ದಂಪತಿ ಹಾಗೂ ಪುತ್ರ ಅಮೇರಿಕಾದಲ್ಲಿ ಅನುಮಾನಾಸ್ಪದ ಸಾವು..!

ದಾವಣಗೆರೆ: ಅಮೆರಿಕದಲ್ಲಿ ದಾವಣಗೆರೆ (Davanagere) ಮೂಲದ ದಂಪತಿ ಹಾಗೂ ಪುತ್ರ ಸಾವನ್ನಪ್ಪಿರುವಂತಹ ಘಟನೆ ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್​ನಲ್ಲಿ ನಡೆದಿದೆ. ಯೋಗೇಶ್ ಹೊನ್ನಾಳ(37), ಪ್ರತಿಭಾ(35), ಯಶ್(6) ಮೃತರು. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ನಿವಾಸಿಗಳಾಗಿದ್ದಾರೆ.

ಕಳೆದ 9 ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದರು. ಯೋಗೇಶ್​, ಪ್ರತಿಭಾ ಇಬ್ಬರೂ ವೃತ್ತಿಯಲ್ಲಿ ಇಂಜಿನಿಯರ್​ ಆಗಿದ್ದರು. ಸಾವಿಗೆ ನಿಖರ ಕಾರಣ ತಿಳಿಸಿ ಮೃತದೇಹ ತರಿಸಿಕೊಡುವಂತೆ ಮೃತ ಯೋಗೇಶ್ ತಾಯಿ ಶೋಭಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Loading

Leave a Reply

Your email address will not be published. Required fields are marked *