ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕಳ್ಳರ ಹಾವಳಿ ರಸ್ತೆ ಬದಿಯ ಎಳನೀರನ್ನು ಬಿಡದ ಖದೀಮರು ರಾತ್ರೋರಾತ್ರಿ ಟಾಟಾ ಏಸ್ ನಲ್ಲಿ ಬಂದು ಎಳನೀರು ಕದ್ದು ಎಸ್ಕೇಪ್ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಹೆಚ್ಚಾಗಿದ್ದ ಕಿಡಿಗೇಡಿಗಳ ಹಾವಳಿ ಪ್ರತಿದಿನ ಬಂದು ಎಳನೀರು ಕದ್ದು ಎಸ್ಕೇಪ್ ಆಗ್ತಿದ್ದ ಖದೀಮರು ಆಗಸ್ಟ್ 7 ರಂದು ಮುಂಜಾನೆ ಜಯನಗರ ರಾಷ್ಟ್ರೀಯ ವಿದ್ಯಾಲಯ ಮೆಟ್ರೊ ನಿಲ್ದಾಣ ಬಳಿ ಕಳ್ಳತನ ಮಾಡಿದ್ದರು.
ಕ್ಯಾಂಟರ್ ನಲ್ಲಿ ಬಂದು 1500 ಎಳನೀರು ಕಳ್ಳತನ ಮಾಡಿ ಆ ನಂತರ ಗಾಡಿಯ ನಂಬರ್ ಪ್ಲೇಟ್ ಗೆ ಮಸಿ ಬಳಿದು ಬರ್ತಿದ್ದ ಕಳ್ಳರುಕಳ್ಘಳರ ಹಾವಳಿಯಿಂದ ಬೇಸತ್ತು ಮಾಲೀಕ ಸಲೀಂ ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಗೌತಮ್ ,ರಘು,ಮಣಿಕಂಠ ಬಂಧಿತ ಆರೋಪಿಗಳಾಗಿದ್ದು ಮೂವರ ಮೇಲೆ ಈ ಹಿಂದೆ ಕೂಡ ಹಲವಾರು ಕೇಸ್ ಗಳಿವೆ. ರಘು ಮೇಲೆ ಕೊಲೆಯತ್ನ ಪ್ರಕರಣ ಕೂಡ ದಾಖಲಾಗಿತ್ತು.ಇದೊಂದು ಸಣ್ಣ ಕೇಸ್ ಎಂದು ಕಡೆಗಣಿಸಿದ ಜಯನಗರ ಪೊಲೀಸರು ಸುಳಿವೇ ಇಲ್ಲದ ಕೇಸ್ ಅನ್ನು ಪೊಲೀಸರು ಬೇಧಿಸಿದ್ದು ಮಾತ್ರ ರೋಚಕವಾಗಿದೆ.
ಸಿಸಿಟಿವಿ ಬೆನ್ನು ಬಿದ್ದವರಿಗೆ ಸಿಕ್ಕಿತ್ತು ಗೂಗಲ್ ಪೇ ಕ್ಲೂ ಹೌದು ಟಾಟಾ ಏಸ್ ವಾಹನ ದಾರಿಯನ್ನೇ ಬೆನ್ನುಬಿದ್ದ ಪೊಲೀಸರು 60 ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಿದದ್ದರು. ಮುಂಜಾನೆ ಉತ್ತರಹಳ್ಳಿ ಬಳಿ ಟೀ ಕುಡಿದ ದೃಶ್ಯ ಸಿಸಿಟಿವಿಯಲ್ಲೆ ಸೆರೆಯಾಗಿತ್ತು ಆ ಕಳ್ಳರು ಟೀ ಕುಡಿದು ಗೂಗಲ್ ಪೇ ನಲ್ಲಿ ಹಣ ಪಾವತಿಸಿದ್ದರು ಅದನ್ನೇ ಸಿಸಿಟಿಯಲ್ಲಿ ನೋಡಿದ್ದ ಪೊಲೀಸರು ಅದೇ ಜಾಗದಲ್ಲಿ ಗೂಗಲ್‌ಪೇ ನಂಬರ್ ಪಡೆದುಕೊಂಡ ಪೊಲೀಸರು ಯಾವ ಬ್ಯಾಂಕ್ ಖಾತೆಯಿಂದ ಹಣ ಸಂದಾಯ ಆಗಿದೆ ಎಂದು ಪರಿಶೀಲನೆ ನಡೆಸಿ ಅವರ ಫೋನ್ಅ ನಂಬರ್ದೇ ತೆಗೆದುಕೊಂಡು ಇದರ ಮೂಲಕ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.