ಬೆಂಗಳೂರು: ಕಾಲೇಜಿನ ಯುವಕ ಯುವತಿಯರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸುವಲ್ಲಿ ಸೂರ್ಯ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಇನ್ನು ಬಂದಿತ ಆರೋಪಿಗಳು ಆನೇಕಲ್ ಹುಸ್ಕೂರು ಸಮೀಪದ ಚನ್ನಕೇಶವ ನಗರದ ಅಭಿ(19) ತರಣ್(20) ,ಸೂರ್ಯ(21),ಹರ್ಷ (21)ಬಂಧಿತ ಅರೋಪಿಗಳು ಇನ್ನು ಬಂಧಿತ ಆರೋಪಿಗಳಿಂದ ಮಾಲ್ ವಶಕ್ಕೆ ಪಡೆಯಲಾಗಿದೆ.
ಹೌದು ಆನೇಕಲ್ ತಾಲೂಕಿನ ಚಂದಾಪುರ ದೊಮ್ಮಸಂದ್ರ ರೈಲ್ವೆ ಹಳಿ ಸಮೀಪದ ಹೀಲಲಿಗೆ ರೈಲ್ವೇ ಸ್ಟೇಷನ್ ಬಳಿ ಕಾಲೇಜಿನ ಯುವಕ ಯುವತಿಯರಿಗೆ ಗಾಂಜಾವನ್ನ ಮಾರಾಟ ಮಾಡುತ್ತಿದ್ರಂತೆ ಈ ಬಗ್ಗೆ ಬಾಬು ಮತ್ತು ಪ್ರಭಾಕರ್ ರೆಡ್ಡಿ ಎನ್ನುವರು ಪೊಲೀಸರಿಗೆ ಮಾಹಿತಿ ನೀಡಿದರಂತೆ ಖಚಿತ ಮಾಹಿತಿಯ ಮೇರೆಗೆ ಸೂರ್ಯ ನಗರ ಪೊಲೀಸ್ರು ದಾಳಿ ನಡೆಸಿದ್ದಾರೆ.
ಇನ್ನು ಸೂರ್ಯ ನಗರ ಪೊಲೀಸರು ಆರೋಪಿಗಳನ್ನು ಬಂಧನ ಮಾಡಲು ಹೋಗಿದ್ದಾಗ ಆರೋಪಿಗಳು ಎಸ್ಕಪ್ ಅಗಲು ಪ್ರಯತ್ನ ಮಾಡಿದ್ರಂತೆ ಬಳಿಕ ಆರೋಪಿಗಳನ್ನ ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.. ಈ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..