ವಿಜಯ ರಾಘವೇಂದ್ರ ಪತ್ನಿ ಸ್ಪಂದನಾರಉತ್ತರಕ್ರಿಯೆ ವಿಧಿವಿಧಾನ ಇಂದು (ಆಗಸ್ಟ್ 16)ರಂದು ಸ್ಪಂದನಾ ಸ್ವಗೃಹದಲ್ಲಿ ನೆರವೇರಿದೆ. ಇದೀಗ ಸ್ಪಂದನಾ ಉತ್ತರಕ್ರಿಯೆ ವಿಧಿವಿಧಾನದಲ್ಲಿ ಶಿವರಾಜ್ಕುಮಾರ್ ದಂಪತಿ ಮತ್ತು ಅಶ್ವಿನಿ ಪುನೀತ್ ರಾಜ್ಕುಮಾರ್ ಭಾಗಿಯಾಗಿದ್ದಾರೆ.
ಉತ್ತರಕ್ರಿಯೆ ಇಂದು (ಆಗಸ್ಟ್ 16) ಬೆಳಿಗ್ಗೆ 8:30ರಿಂದ ಸ್ಪಂದನಾ ಸ್ವಗೃಹದಲ್ಲಿ ಶಾಂತಿ ಹೋಮ ನೆರವೇರಿದೆ. ವಿಜಯ ಪತ್ನಿ ಸ್ಪಂದನಾ 11ನೇ ದಿನದ ಪುಣ್ಯಸ್ಮರಣೆಯಲ್ಲಿ ನಟ ಶಿವಣ್ಣ ದಂಪತಿ, ಅಶ್ವಿನಿ ಜೊತೆ ಪುನೀತ್ ಪುತ್ರಿ ಕೂಡ ಭಾಗಿಯಾಗಿದ್ದಾರೆ. ಶಾಂತಿ ಹೋಮ ಇದೀಗ ನೆರವೇರಿದ್ದು, ಮಧ್ಯಾಹ್ನ 1 ಗಂಟೆಯ ನಂತರ ಕೋದಂಡರಾಮಪುರದ ಯಂಗ್ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ (ಬಿಬಿಎಂಪಿ ಮೈದಾನ) ಭೋಜನ ಆರಂಭವಾಗಲಿದೆ. ಮನೆಮಗಳು ಸ್ಪಂದನಾ ಆತ್ಮಕ್ಕೆ ಚಿರಶಾಂತಿ ಕೋರಲು ಸರ್ವರಿಗೂ ಭಾಗಿಯಾಗುವಂತೆ ಬಿ.ಕೆ ಶಿವರಾಂ ಮತ್ತು ಎಸ್.ಎ ಚಿನ್ನೆಗೌಡರು ಮತ್ತು ಕುಟುಂಬಸ್ಥರು ಸರ್ವರಿಗೂ ಆಹ್ವಾನ ನೀಡಿದ್ದರು.
ಸುಮಾರು 4000 ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ವಿಐಪಿ- ಸಾರ್ವಜನಿಕರಿಗೆ ಬೇರೆ ಬೇರೆ ಊಟದ ವ್ಯವಸ್ಥೆ ಮಾಡಲಾಗಿದೆ. 80ಕ್ಕೂ ಹೆಚ್ಚು ಅಡುಗೆಯವರಿಂದ ಭೋಜನ ತಯಾರಿ ಮಾಡಿಸಿದ್ದಾರೆ. ಬರುವ ಗೆಸ್ಟ್ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲಿದ್ದು, ಪೊಲೀಸ್ ಸಿಬ್ಬಂದಿಗಳು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ
ಆಗಸ್ಟ್ 6ರಂದು ಭಾನುವಾರ ಬ್ಯಾಕಾಂಕ್ನಲ್ಲಿ ಹೃದಯಾಘಾತದಿಂದ ಸ್ಪಂದನಾ ನಿಧನರಾಗಿದ್ದರು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ.