ಹಾವೇರಿ: ಮೆಕ್ಕೆಜೋಳಕ್ಕೆ ಕೊಳೆ ರೋಗ ಹಿನ್ನಲೆ ಮೆಕ್ಕೆಜೋಳದ ಬೆಳೆಯನ್ನ ಟ್ಯಾಕ್ಟರ್ ನಿಂದ ರೂಟರ್ ಹೊಡೆದು ನಾಶ ಮಾಡಲಾಗುತ್ತಿದೆ. ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ನಾಗಪ್ಪ ಗೊಬ್ಬರಗುಂಪಿ ಎಂಬುವ ರೈತ 10 ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದ. ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದ. ಆದ್ರೆ ಕೊಳೆ ರೋಗ ಹಿನ್ನಲೆ ಟ್ರಾಕ್ಟರ್ ನಿಂದ ಬೆಳೆ ಸಂಪೂರ್ಣ ನಾಶ ಮಾಡಿದ್ದಾರೆ. ಕಳೆದ ತಿಂಗಳು ನಿರಂತರ ಮಳೆಗೆ ಮೆಕ್ಕೆಜೋಳಕ್ಕೆ ಲದ್ದಿರೋಗ, ಕೊಳೆ ರೋಗ ಕಾಣಿಸಿಕೊಂಡಿತ್ತು.