ಬೆಂಗಳೂರು: ದೇಶದಲ್ಲಿ ಸ್ವಾತಂತ್ರ್ಯ ಆಚರಣೆ ಮಾಡುತ್ತಿದ್ದೇವೆ. ಹಾಗೇ ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆ ಮಾಡುತ್ತಿದ್ದೇವೆ. ಗಣರಾಜ್ಯದ ದಿನ ಅವರ ಹುತಾತ್ಮ ದಿನ ಆಚರಣೆ ಮಾಡುತ್ತೇವೆ. 77ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿದ್ದೇವೆ. ನಿಮಗು 77 ವರ್ಷ ಆಗುತ್ತಿದೆ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರಿಗೆ ವಯಸ್ಸಿನ ನೆನಪು ಮಾಡಿಸಿದರು. ನಾವೆಲ್ಲಾ ಸೇರಿ ಬಲಿಷ್ಠವಾದ ಭಾರತ ನಿರ್ಮಾಣ ಮಾಡಬೇಕು. ಅಭಿವೃದ್ಧಿಶೀಲ ಕರ್ನಾಟಕ ನಿರ್ಮಾಣ ಮಾಡಬೇಕು. ಬ್ರೀಟಿಷರನ್ನು ತೊಲಗಿಸಿದ ಹಾಗೆ ಕೋಮುವಾದಿಗಳನ್ನು ಸೋಲಿಸಬೇಕಿದೆ. ಕರ್ನಾಟಕ ರಾಜ್ಯದಿಂದ ಬುನಾದಿ ಶುರುವಾಗಿದೆ. ನಾವೆಲ್ಲಾ ಸೇರಿ ಹೋರಾಟ ಮಾಡೋಣ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿಮ್ಮೆಲ್ಲ ವಿಚಾರಗಳಿಗೆ ಬದ್ದವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.