ಹಾವೇರಿ: ನಾಡಿನ ಜನತೆಗೆ 77ನೇ ಸ್ವಾತಂತ್ರ್ಯೋತ್ಸವದ ಶುಭಾಷಯಗಳು. ಈ ದಿವಸ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದೇವೆ. ನೃತ್ಯದ ಮೂಲಕ ಜನ ಸಾಮನ್ಯರ ಮನಸ್ಸು ಮುಟ್ಟುವ ಕೆಲಸ ಮಾಡಿದ ಮಕ್ಕಳಿಗೆ, ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹಾವೇರಿ ಜಿಲ್ಲೆಗೆ ಮೂರು ಗುರಿಗಳನ್ನಿಟ್ಟುಕೊಂಡಿದ್ದೇವೆ. ಹಾವೇರಿ ಮೆಡಿಕಲ್ ಕಾಲೇಜು ಶೀಘ್ರದಲ್ಲೇ ಆರಂಭವಾಗುತ್ತದೆ. ಮತ್ತೆ 25 ಕೋಟಿ ರೂ. ಹಣ ಸಿಎಂ ಬಿಡುಗಡೆ ಮಡಿದ್ದಾರೆ. ಕುಡಿಯುವ ನೀರಿನ ಸುವ್ಯವಸ್ಥೆ ಮಾಡುತ್ತಿದ್ದೇವೆ. ನೀರಾವರಿ ಇಲಾಖೆಯ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಈ ಮೂರು ಕೆಲಸಗಳನ್ನು ಆದಷ್ಟು ಬೇಗ ಮಾಡಿ ಮುಗಿಸುತ್ತೇವೆ ಎಂದು ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.