ಮಂಡ್ಯ: ಡಿಕೆ ಶಿವಕುಮಾರ್ ಭಂಡರು, ರಾಮನಗರ ಜನರಿಗೆ ಮೋರಿ ನೀಡು ಕುಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ. ಈ ಮೂಲಕ ನವರಂಗಿ ನಾರಾಯಣ ಎಂದು ಹೇಳಿಕೆ ನೀಡಿದ್ದ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಡಾ.ಸಿನ್ ಅಶ್ವತ್ಥನಾರಾಯಣ ಅವರು, ಕಾಂಗ್ರೆಸ್ ರಾಜ್ಯದಲ್ಲಿ ಅಂಗಲಾಚಿ ಅಧಿಕಾರಕ್ಕೆ ಬಂದರು. ಅಧಿಕಾರಕ್ಕೆ ಬಂದ ಬಳಿಕ ಏಕಾಏಕಿ ಬದಲಾದರು. ಇವರೇ ನವರಂಗಿಗಳು ನಾವಲ್ಲ. ಮಾತು ಗೊತ್ತು ಅಂತ ಡಿಕೆಶಿ ಭಂಡತನ ತೋರುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಭಂಡರು ಎಲ್ಲವನ್ನೂ ಸಮರ್ಥಿಸಿಕೊಳ್ಳುತ್ತಾರೆ. ರಾಮನಗರದಲ್ಲಿ ಜನರಿಗೆ ಮೋರಿ ನೀರು ಕುಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.