ಬೆಂಗಳೂರು: ನವರಂಗಿ ನಾರಾಯಣ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಅಶ್ವತ್ಥ್ ನಾರಾಯಣ ತಿರುಗೇಟು ಕೊಟ್ಟಿದ್ದಾರೆ. ವೈಯಕ್ತಿವಾಗಿ ತೇಜೋವಧೆ ಮಾಡುವುದು ಸರಿಯಲ್ಲ. ನನಗೆ ಯಾರ ಮೇಲೂ ವೈಯಕ್ತಿವಾಗಿ ದ್ವೇಷ ಇಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಅಶ್ವತ್ಥ್ನಾರಾಯಣ ತಿರುಗೇಟು ಕೊಟ್ಟರು. ರಾಮನಗರದಲ್ಲಿ ಯಾವುದೇ ಅಭಿವೃದ್ದಿಯಾಗಿಲ್ಲ, ಸ್ವಯಂ ಅಭಿವೃದ್ದಿಯಾಗಿದೆ. ರಾಮನಗದಲ್ಲಿ ರಾಮನದೇವಾಲಯ ಮಾಡಲು ಬಿಜೆಪಿಯೇ ಬರಬೇಕಾ? ಇವರ ಕೈಯಲ್ಲಿ ದೇವಾಲಯ ಮಾಡಲು ಆಗುವುದಿಲ್ವಾ?ನಾವು ಪ್ರೀತಿ ಮತ್ತು ಗೌರವ ಕೊಡಲು ಸದಾ ಸಿದ್ದರಾಗಿದೇವೆ. ಬೆಂಗಳೂರು ನಮ್ಮ ಜೀವಾಳ, ಬೆಂಗಳೂರಿಗೆ ವಿಶ್ವದಲ್ಲಿ ಹೆಸರಿದೆ. ಇವರಿಗೆ ಬೆಂಗಳೂರಿಗೆ ಏನ್ ಸಂಬಂಧ? ಎಂದು ವಾಗ್ದಾಳಿ ನಡೆಸಿದರು.