ಬೆಂಗಳೂರು: ಫೇಸ್ಬುಕ್ ಲೈವ್ನಲ್ಲಿ ಆಕ್ಷೇಪಾರ್ಹ ಪದ ಬಳಕೆ ಪ್ರಕರಣ ಸಂಬಂಧ ನಟ ಉಪೇಂದ್ರ ಅವರನ್ನು ಚಿತ್ರರಂಗದಿಂದ ಐದು ವರ್ಷ ಬ್ಯಾನ್ ಮಾಡುವಂತೆ ಫಿಲ್ಮ್ ಚೇಂಬರ್ಗೆ ಸಾಮಾಜಿಕ ಕಾರ್ಯಕರ್ತ ನವೀನ್ ಮನವಿ ಮಾಡಿದ್ದಾರೆ. ಗಲಭೆ, ಅಶಾಂತಿ ಸೃಷ್ಟಿ ಮಾಡಲು ನಟ ಉಪೇಂದ್ರ ಹೊರಟಿದ್ದಾರೆ. ಜಾತಿ ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಈ ಪ್ರಕರಣವನ್ನು ಫಿಲ್ಮ್ ಚೇಂಬರ್ ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.