ಲಾಡರ್ಹಿಲ್: 2016ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ವಿರುದ್ಧ ಟಿ20 ಸರಣಿ ಗೆದ್ದಿದ್ದ ವೆಸ್ಟ್ ಇಂಡೀಸ್ ಬರೋಬ್ಬರಿ 7 ವರ್ಷಗಳ ಬಳಿಕ ಟಿ20 ಸರಣಿಯಲ್ಲಿ ಭಾರತವನ್ನ ಸೋಲಿಸಿದ್ದಾರೆ. ಈ ಮೂಲಕ 2016ರ ನಂತರ ಮೊದಲ ಬಾರಿಗೆ ವಿಂಡೀಸ್ ಒಂದಕ್ಕಿಂತ ಹೆಚ್ಚು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತವನ್ನು ಸೋಲಿಸಿದ ದಾಖಲೆಯನ್ನೂ ಬರೆದಿದೆ.
ರೋವ್ಮನ್ ಪೋವೆಲ್ ನಾಯಕತ್ವದ ವಿಂಡೀಸ್ ತಂಡವು ಟಿ20 ಸರಣಿಯ 5ನೇ ಮತ್ತು ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾವನ್ನ 8 ವಿಕೆಟ್ಗಳಿಂದ ಏಕಪಕ್ಷೀಯವಾಗಿ ಸೋಲಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನ 3-2ರಿಂದ ಗೆದ್ದುಕೊಂಡಿದೆ. ರೊಮಾರಿಯೊ ಶೆಫರ್ಡ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನ (4 ವಿಕೆಟ್) ಹಾಗೂ ಬ್ರಾಂಡನ್ ಕಿಂಗ್ ಮತ್ತು ನಿಕೋಲಸ್ ಪೂರನ್ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಸರಣಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.̤
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಪಡೆ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಸಾಧ್ಯವಾಯಿತು. 166 ರನ್ಗಳ ಗುರಿ ಪಡೆದ ವಿಂಡೀಸ್ 18 ಓವರ್ಗಳಲ್ಲೇ ಕೇವಲ 2 ವಿಕೆಟ್ ನಷ್ಟಕ್ಕೆ 171 ರನ್ ಚಚ್ಚಿ ಜಯ ಸಾಧಿಸಿತು. ಈ ಮೂಲಕ 5 ಪಂದ್ಯ
4ನೇ ಪಂದ್ಯದಲ್ಲೇ 165 ರನ್ಗಳ ಜೊತೆಯಾಟ ನೀಡುವ ಮೂಲಕ ಅಬ್ಬರಿಸಿದ್ದ ಶುಭಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ನಿರ್ಣಾಯಕ ಪಂದ್ಯದಲ್ಲೇ ಕೈಕೊಟ್ಟು ಪೆವಿಲಿಯನ್ ಸೇರಿದರು. ಇನ್ನೂ ಸಂಜು ಸಾಮ್ಸನ್ ಕೂಡ ಅವಕಾಶ ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾದರು. ನಾಯಕ ಹಾರ್ದಿಕ್ ಪಾಂಡ್ಯ ಕೂಡ ಕೈಚೆಲ್ಲಿದರು. ಸೂರ್ಯಕುಮಾರ್ ಯಾದವ್ ಅವರ ಜವಾಬ್ದಾರಿ ಅರ್ಧಶತಕದ ನೆರವಿನಿಂದ 165 ರನ್ ಗಳಿಸಿದರೂ ಕಳಪೆ ಬೌಲಿಂಗ್ ಪ್ರದರ್ಶನದಿಂದ ವಿಂಡೀಸ್ ಆಕ್ರಮಣಕ್ಕೆ ತುತ್ತಾಯಿತು. ಟೀಂ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ 61 ರನ್ (45 ಎಸೆತ, 3 ಸಿಕ್ಸರ್, 4 ಬೌಂಡರಿ), ತಿಲಕ್ ವರ್ಮಾ 27 ರನ್ ಗಳಿಸಿದರುಗಳ ಟಿ20 ಸರಣಿಯಲ್ಲಿ 3-2 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿತು.
ವಿಂಡೀಸ್ ಪರ ನಿಕೋಲಸ್ ಪೂರನ್ ಹಾಗೂ ಬ್ರಾಂಡನ್ ಕಿಂಗ್ಸ್ ಜೊತೆಯಾಟಕ್ಕೆ ಟೀಂ ಇಂಡಿಯಾ ಬೌಲರ್ಗಳು ಕಂಗಾಲಾದರು. ಆರಂಭಿಕ ಬ್ರಾಂಡನ್ ಕಿಂಗ್ಸ್ ಅಜೇಯ 85 ರನ್ (55 ಎಸೆತ, 5 ಬೌಂಡರಿ, 6 ಸಿಕ್ಸರ್) ಸಿಡಿಸಿದರೆ, ನಿಕೋಲಸ್ ಪೂರನ್ 35 ಎಸೆತಗಳಲ್ಲಿ 47 ರನ್ (4 ಸಿಕ್ಸರ್, 1 ಬೌಂಡರಿ) ಚಚ್ಚಿ ಔಟಾದರು. ಕೊನೆಯಲ್ಲಿ ನಾಯಕ ರೋವ್ಮನ್ ಪೋವೆಲ್ 13 ಎಸೆತಗಳಲ್ಲಿ 22 ರನ್ ಗಳಿಸಿ ಜಯದ ದಡ ಸೇರಿಸಿದರು.