ಅಕ್ರಮವಾಗಿ 15 ಕೆಜಿ ಶ್ರೀಗಂಧವನ್ನು ಸಂಗ್ರಹಿಸಿದ್ದ ಆರೋಪಿಯ ಬಂಧನ

ಶಿವಮೊಗ್ಗ: ಅಕ್ರಮವಾಗಿ 15 ಕೆಜಿ ಶ್ರೀಗಂಧವನ್ನು ಸಂಗ್ರಹಿಸಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು  ಬಂಧಿಸಿದ ಪ್ರಕರಣ ಸೂಳೆಬೈಲಿನಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಬಾಬುಜಾನ್ (58) ಎಂದು ಗುರುತಿಸಲಾಗಿದೆ. ಆರೋಪಿಯಿಂದ 15 ಕೆಜಿ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶ್ರೀಗಂಧದ ಸಂಬಂಧಿ ಪ್ರಕರಣಗಳಿವೆ. ಆದರೂ ಆರೋಪಿ ತನ್ನ ಕಸುಬನ್ನು ಮುಂದುವರೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಶ್ರೀಗಂಧದ ಮರದ ತುಂಡುಗಳನ್ನು ಸಂಗ್ರಹಿಸಿ ಬೇರೆ ಬೇರೆ ವಸ್ತುಗಳ ರೂಪದಲ್ಲಿ ಮಾರಾಟ ಮಾಡುತ್ತಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಅರಣ್ಯಾಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Loading

Leave a Reply

Your email address will not be published. Required fields are marked *