ಬೆಂಗಳೂರು: ಸರ್ಕಾರ ಬಂದ ಮೇಲೆ ಸ್ಕಾಂಡಲ್ ಶುರುವಾಗಿದೆ. ವರ್ಗಾವಣೆ ದಂಧೆ, ಕಮಿಷನ್ ಆರೋಪವಿದೆ. ಒಂದೇ ಒಂದು ಸಾಕ್ಷಿ ನೀಡದೆ ನಮ್ಮ ಮೇಲೆ ಆರೋಪ ಮಾಡಿದ್ದರು. ಮಾನನಷ್ಟ ಮೊಕ್ಕದಮ್ಮೆ ಹಾಕಿದಾಗಲೂ ಸಾಕ್ಷಿ ಕೊಡಲಿಲ್ಲ. ಈಗ ತನಿಖೆಗೆ ಕೊಡಿ ಎಂದು ಮಾಜಿ ಸಚಿವ ಆರ್ ಅಶೋಕ ಹೇಳಿದರು. ನಿಮ್ಮ ಲೆಕ್ಕದಲ್ಲಿ ಎಲ್ಲರೂ ಕಳ್ಳರಾ? ನಿಮ್ಮ ಸರ್ಕಾರ ಬಂದ ಮೇಲೆ ಎಲ್ಲರೂ ಸತ್ಯ ಹರಿಶ್ಚಂದ್ರರು. 5 ರಿಂದ 10 ಜನ ಕಳ್ಳರಿಹಬಹುದು, ಹಾಗಾಂತ ಎಲ್ಲರನ್ನು ತಡೆ ಹಿಡಿದರೆ ಎಷ್ಟರ ಮಟ್ಟಿಗೆ ಸರಿ? ಕಾಂಗ್ರೆಸ್ನವರು ನಿಜವಾದ ಹರಿಶ್ಚಂದ್ರದ ಮೊಮ್ಮಕ್ಕಳಾಗಿದ್ದರೆ ನಿಮ್ಮ ಸರ್ಕಾರದ ಅವಧಿಯ ಬಗ್ಗೆ ಕೂಡ ತನಿಖೆ ಮಾಡಿ, 2013-2018 ರ ಅವಧಿಯನ್ನು ತನಿಖೆ ಮಾಡಿಸಿ. ಆಗಿನ ಟೆಂಡರ್ಗಳ ಬಗ್ಗೆ ಕೂಡ ತನಿಖೆ ಮಾಡಿ ಎಂದು ಸವಾಲು ಹಾಕಿದರು.