ದಾಮಿ, ಪಿಸ್ತಾ, ಒಣದ್ರಾಕ್ಷಿ, ಖರ್ಜೂರ ಮತ್ತು ಅಂಜೂರದಲ್ಲಿ ದೇಹಕ್ಕೆ ಪ್ರಯೋಜನಕಾರಿಯಾದ ಸಾಕಷ್ಟು ಪೋಷಕಾಂಶಗಳಿವೆ. ಮಹಿಳೆಯರು ತಮ್ಮ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪಡೆಯಲು ಧಾನ್ಯಗಳು, ತರಕಾರಿಗಳು, ಹಣ್ಣುಗಳೊಂದಿಗೆ ಡ್ರೈ ಫ್ರೂಟ್ಸ್ ಕೂಡ ತಿನ್ನಬೇಕು.
ಆದರೆ ಪ್ರತಿದಿನ ಬಾದಾಮಿ ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?
*ಬಾದಾಮಿಯನ್ನು ನೆನೆಸಿ ಅದರ ಮೇಲಿನ ಸಿಪ್ಪೆ ತೆಗೆದು ನಂತರ ತಿನ್ನುವುದು ಉತ್ತಮ.
*ಒಂದು ಹಿಡಿ ಬಾದಾಮಿಯನ್ನು ರಾತ್ರಿ ನೆನೆಸಿಟ್ಟು, ಮರುದಿನ ಬೆಳಗ್ಗೆ ಎದ್ದಾಗ ಉಪಾಹಾರಕ್ಕೆ ಮೊದಲು ತಿನ್ನಬಹುದು. ನೀವು ಇದನ್ನು ಪ್ರತಿದಿನ ಸೇವಿಸಿದರೆ ಪ್ರೋಟೀನ್, ಫೈಬರ್, ಜೀವಸತ್ವಗಳು, ಖನಿಜಗಳು, ಆಂಟಿಆಕ್ಸಿಡೆಂಟ್ಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಪಡೆಯಬಹುದು.
*ಬಾದಾಮಿಯ ನಿಯಮಿತ ಸೇವನೆಯಿಂದ ಉಸಿರಾಟದ ತೊಂದರೆ, ಹೃದ್ರೋಗ, ಮಧುಮೇಹ, ಚರ್ಮದ ಸಮಸ್ಯೆಗಳು, ಕೂದಲು ಉದುರುವಿಕೆ ಮತ್ತು ರಕ್ತಹೀನತೆಯಂತಹ ಕಾಯಿಲೆಗಳನ್ನು ತಡೆಯಬಹುದು.
*ಪ್ರತಿದಿನ 6-7 ನೆನೆಸಿದ ಬಾದಾಮಿ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
*ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಜನರು ಪ್ರತಿದಿನ 5 ಬಾದಾಮಿ ತಿಂದರೆ ರಕ್ತದಲ್ಲಿರುವ ಕೆಟ್ಟ ಕೊಬ್ಬು ಕರಗುತ್ತದೆ. ನೆನೆಸಿದ ಬಾದಾಮಿಯಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಆಲ್ಫಾ ಟ್ಯಾಕೋಫೆರಾಲ್ ಅನ್ನು ಹೆಚ್ಚಿಸಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
*ರಕ್ತದಲ್ಲಿ ಬಿಳಿ ಮತ್ತು ಕೆಂಪು ಕಣಗಳನ್ನು ಹೆಚ್ಚಿಸುವ ಶಕ್ತಿ ಬಾದಾಮಿಗೆ ಇದೆ.
*ಇದು ಮೂಳೆಗಳ ಬೆಳವಣಿಗೆಗೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ರಂಜಕವನ್ನು ಹೊಂದಿರುತ್ತದೆ.
*ಬಾದಾಮಿ ಎಣ್ಣೆಯಿಂದ ಚರ್ಮಕ್ಕೆ ಮಸಾಜ್ ಮಾಡಿದರೆ ದೇಹದಲ್ಲಿ ರಕ್ತದ ಹರಿವು ಹೆಚ್ಚುತ್ತದೆ ಮತ್ತು ಚರ್ಮವು ಆರೋಗ್ಯಕರವಾಗಿ ಹೊಳೆಯುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿದರೆ ಕಾಂತಿ ಹೆಚ್ಚುತ್ತದೆ