ಮತ್ತೊಂದು ಮಡಚುವ ಫೋನ್ ತರಲಿದೆ ಸ್ಯಾಮ್ ಸಂಗ್ ಗ್ಯಾಲಕ್ಸಿ

ಸ್ಯಾಮ್ಸಂಗ್ ಗ್ಯಾಲಕ್ಸಿ ಸರಣಿಯಲ್ಲಿ ಮಡಚಬಲ್ಲ ಫೋನ್ಗಳನ್ನು ಪರಿಚಯಿಸಿ, ಟೆಕ್ ಲೋಕದಲ್ಲಿ ಸ್ಮಾರ್ಟ್ಫೋನ್ ಕ್ಷೇತ್ರದಲ್ಲಿ ಹೊಸತೊಂದು ಶಕೆ ಮೂಡಿಸಿದೆ. ಅದಾದ ಬಳಿಕ, ಹುವೈ, ಮೋಟೋರೋಲಾ ಕೂಡ ಮಡಚಬಲ್ಲ ಫೋನ್ ಬಿಡುಗಡೆ ಮಾಡಿದೆ. ಮತ್ತಷ್ಟು ಕಂಪನಿಗಳು ಕೂಡ ಮಡಚುವ ಸರಣಿಯ ಫೋನ್ ಪರಿಚಯಿಸಲು ಮುಂದಾಗಿವೆ.
ಹೀಗಿರುವಾಗ ಸ್ಯಾಮ್ಸಂಗ್ ಮತ್ತೊಂದು ಮಡಚಬಲ್ಲ ಫೋನ್ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಗ್ಯಾಲಕ್ಸಿ ಸರಣಿಯಲ್ಲಿ ಮೊದಲು ಬಿಡುಗಡೆ ಮಾಡಿದ ಸ್ಯಾಮ್ಸಂಗ್ ಫೋಲ್ಡ್ ಮಾದರಿಯಲ್ಲೇ, ಹೊಸತೊಂದು ಗ್ಯಾಲಕ್ಸಿ ಫೊಲ್ಡ್ 2 ಫೋನ್ ಅನ್ನು ಬಿಡುಗಡೆ ಮಾಡಲು ಸ್ಯಾಮ್ಸಂಗ್ ಸಜ್ಜಾಗಿದೆ.
ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಫೋಲ್ಡ್ 2 ಫೋನ್ ಆಗಸ್ಟ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಕೊರಿಯಾದ ಮಾಧ್ಯಮವೊಂದರ ವರದಿ ಪ್ರಕಾರ, ಸ್ಯಾಮ್ಸಂಗ್ ಹೊಸ ಗ್ಯಾಲಕ್ಸಿ ಫೋಲ್ಡ್ 2 ಫೋನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಗ್ಯಾಲಕ್ಸಿ ಸರಣಿಯಲ್ಲಿ ಹೊಸ ನೋಟ್ 20 ಫೋನ್ ಕೂಡ ಮಾರುಕಟ್ಟೆ ಪ್ರವೇಶಿಸಲಿದ್ದು, ಇದೇ ಸಂದರ್ಭದಲ್ಲಿ ಹೊಸ ಗ್ಯಾಲಕ್ಸಿ ಫೋಲ್ಡ್ 2 ಫೋನ್ ಕೂಡ ಮಾರುಕಟ್ಟೆ ಪ್ರವೇಶಿಸಲಿದೆ. ಈ ಮೊದಲು ಬಿಡುಗಡೆ ಮಾಡಿದ್ದ ಗ್ಯಾಲಕ್ಸಿ ಫೋಲ್ಡ್ ಮತ್ತು ಗ್ಯಾಲಕ್ಸಿ ಝೆಡ್ ಫ್ಲಿಪ್ ಫೋನ್ಗೆ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ, ಸ್ಯಾಮ್ಸಂಗ್ ಹೊಸ ಫೋನ್ ಬಿಡುಗಡೆಗೆ ಮುಂದಾಗಿದೆ.
ಹೇಗಿರಲಿದೆ ಗ್ಯಾಲಕ್ಸಿ ಫೋಲ್ಡ್ 2
ಸ್ಯಾಮ್ಸಂಗ್ ಗ್ಯಾಲಕ್ಸಿ ಫೋಲ್ಡ್ 2 ಫೋನ್ 7.59 ಇಂಚಿನ ಡಿಸ್ಪ್ಲೇ, ಸ್ನ್ಯಾಪ್ಡ್ರ್ಯಾಗನ್ 865 ಪ್ರೊಸೆಸರ್, 256 ಜಿಬಿ ಸ್ಟೋರೇಜ್, 64+16+13 ಮೆಗಾಪಿಕ್ಸೆಲ್ ಕ್ಯಾಮರಾ, 4500 mAh ಬ್ಯಾಟರಿ ಮತ್ತು 12 GB RAM ಹೊಂದಿರುತ್ತದೆ ಎನ್ನಲಾಗಿದೆ.

Loading

Leave a Reply

Your email address will not be published. Required fields are marked *