ಭಾರತದಲ್ಲಿ ತಯಾರಾಗುವ ಕೆಮ್ಮಿನ ಸಿರಪ್ ಸುರಕ್ಷಿತವಲ್ಲ: ವಿಶ್ವ ಅರೋಗ್ಯ ಸಂಸ್ಥೆ

ಬಗ್ದಾದ್: ಇರಾಕ್ನಲ್ಲಿ  ಮಾರಾಟವಾಗಿರುವ ಭಾರತದಲ್ಲಿ  ತಯಾರಿಸಲಾದ ಕಾಮನ್ ಕೋಲ್ಡ್ ಕೆಮ್ಮಿನ ಸಿರಪ್ನಲ್ಲಿ  ವಿಷಕಾರಿ ಅಂಶ ಪತ್ತೆಯಾಗಿದ್ದು, ಬಳಕೆಗೆ ಯೋಗ್ಯವಲ್ಲದ್ದಾಗಿರುವುದು ಕಂಡುಬಂದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ  ಎಚ್ಚರಿಕೆ ನೀಡಿದೆ.
ಕೋಲ್ಡ್ ಔಟ್ ಎಂಬ ಹೆಸರಿನ ಸಿರಪ್ ಅನ್ನು ಭಾರತದ ಫೋರ್ಟ್ಸ್ ಲ್ಯಾಬೋರೇಟರೀಸ್ ತಯಾರಿಸಿದೆ. ಗ್ಲೋಬಲ್ ಹೆಲ್ತ್ ಏಜೆನ್ಸಿಯು ಈ ಸಿರಪ್ನಲ್ಲಿ ವಿಷಕಾರಿ ಅಂಶವನ್ನು ಪತ್ತೆಹಚ್ಚಿದೆ. ಇದರಲ್ಲಿ ಡೈಥಿಲೀನ್ ಮತ್ತು ಎಥಿಲೀನ್ ಗ್ಲೈಕೋಲ್ಗಿಂತ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಕಂಡುಹಿಡಿದಿರುವುದಾಗಿ ವರದಿಯಾಗಿದೆ
ಕೆಮ್ಮಿನ ಸಿರಪ್ ತಯಾರಕರು ಹಾಗೂ ಮಾರಾಟಗಾರರು ಉತ್ಪನ್ನದ ಗುಣಮಟ್ಟ ಹಾಗೂ ಸುರಕ್ಷತೆಯ ಬಗ್ಗೆ ಏಜೆನ್ಸಿಗೆ ಯಾವುದೇ ಖಾತರಿಗಳನ್ನು ನೀಡಿಲ್ಲ. ಕಂಪನಿಗಳು ಈ ಆರೋಪಗಳಿಗೆ ಹಾಗೂ ಎಚ್ಚರಿಕೆಗಳಿಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Loading

Leave a Reply

Your email address will not be published. Required fields are marked *