ಬೆಂಗಳೂರು ;- ವಿಶೇಷ ವೇಷಭೂಷಣ ಧರಿಸಿ ಬೈಕ್ನಲ್ಲಿ ಸ್ಟಂಟ್ ಮಾಡುತ್ತಾ ರೀಲ್ಸ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕಲರ್ ಫುಲ್ ಆಗಿ ಬೈಕ್ ಆಲ್ಟರ್ ಮಾಡಿ ಕೆಐಎಎಲ್ ಏರ್ಪೋರ್ಟ್ ರಸ್ತೆಯಲ್ಲಿ ಸಿಗ್ನಲ್ ಜಂಪ್ ಮಾಡಿ ಬೈಕ್ ಗೆ ಕಾರು ತಾಕಿಸಿದ ಎಂಬ ಕಾರಣಕ್ಕೆ ಕಾರನ್ನ ಹಿಂಬಾಲಿಸಿ ಕನ್ನಡಿ ಹೊಡೆದು ಹಾಕಿದ್ದ ಬೈಕ್ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಬೈಕ್ ನಲ್ಲಿ ಸ್ಟಂಟ್ ಮಾಡುತ್ತಾ ರೀಲ್ಸ್ ಮಾಡುತ್ತಿದ್ದ. ವಿಶೇಷ ವೇಷಭೂಷಣ ಧರಿಸಿ ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿದ್ದ ಎಂದು ಹೇಳಲಾಗಿದೆ.
ತನ್ನ ಎಲ್ಲ ಸ್ಟಂಟ್ ಗಳನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸವಾರ ಅಪ್ಲೋಡ್ ಮಾಡುತ್ತಿದ್ದ. ವಿಡಿಯೋ ಗಮನಿಸಿ ಸಾರ್ವಜನಿಕರಿಂದ ಪೊಲೀಸರಿಗೆ ದೂರು ನೀಡಲಾಗಿದೆ. ವಿಡಿಯೋ ಪರಿಶೀಲನೆ ನಡೆಸಿ ಬೈಕ್ ಮತ್ತು ಸವಾರನ ಪತ್ತೆ ಹಚ್ಚಿದ ಯಲಹಂಕ ಸಂಚಾರ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.