BGSIAS ಹಾಸ್ಟೆಲ್ ಪೂಜೆ ಮತ್ತು ಫ್ರೆಶರ್ಸ್ ಡೇ – 2023 ಕಾರ್ಯಕ್ರಮ

(ಕೇಂಬ್ರಿಡ್ಜ್ & IB) ನಲ್ಲಿ BGSIAS ಹಾಸ್ಟೆಲ್ ಪೂಜೆ ಮತ್ತು ಫ್ರೆಶರ್ಸ್ ಡೇ – 2023 ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ “ಇಂದಿನ ಮಕ್ಕಳೇ ದೇಶದ ಮುಂದಿನ ಭವಿಷ್ಯ. ಪೋಷಕರು, ಶಿಕ್ಷಕರು ನಿಮ್ಮ ಭವಿಷ್ಯ ರೂಪಿಸುತ್ತಾರೆ.

ಇಂತಹ ಶ್ರೇಷ್ಠ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವುದು ನಿಮ್ಮ ಭಾಗ್ಯ. ಎಲ್ಲ ವ್ಯವಸ್ಥೆ ಇರುವ ಇಲ್ಲಿ ನೀವು ಶ್ರದ್ಧೆಯಿಂದ ಓದಬೇಕು. ಮುಂದೆ ಕೇವಲ ವಯಕ್ತಿಕ ನೆಲೆಯಲ್ಲಿ ಅಲ್ಲದೇ ದೇಶಕ್ಕಾಗಿಯೂ ಸಾಧನೆ ಮಾಡಬೇಕು. ಸರ್ಕಾರ ನಿಮಗೆ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಪರಮಪೂಜ್ಯರ ಆಶೀರ್ವಾದ ಸದಾ ಇರಲಿ” ಎಂದರು.

ಖ್ಯಾತ ನಟ ದರ್ಶನ್ ತೂಗುದೀಪ್ ಮಾತನಾಡಿ “ಮನುಷ್ಯತ್ವ ಇಲ್ಲದ ವಿದ್ಯೆಗೆ ಬೆಲೆಯಿಲ್ಲ. ಪ್ರಾಣಿಗಳನ್ನು ಸಹ ಪ್ರೀತಿಸಿ. ಅವುಗಳನ್ನು ಸಹ ನಮ್ಮ ಮನೆಯವರಂತೆ ಕಂಡರೆ‌, ಆಗ ಅವುಗಳ ಪ್ರೀತಿಯಿಂದ ಸಿಗುವ ಸಂತೋಷ ಬೆರೆಲ್ಲಿಯೂ ಸಿಗದು. ವಿದ್ಯೆ ಎಲ್ಲರನ್ನೂ ಎತ್ತರಕ್ಕೆ ಕೊಂಡೊಯ್ಯುತ್ತದೆ” ಎಂದರು.

ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ಮಾತನಾಡಿ “ನಮ್ಮ ಬದುಕು, ದೇಶ ಬೆಳಗಲು ಒಂದೇ ಅಸ್ತ್ರ ಇರುವುದು, ಅದು ವಿದ್ಯೆ. ಭಾರತವನ್ನು ಜಗತ್ತು ತಿರುಗಿ ನೋಡುತ್ತಿದೆ ಅಂದರೆ ಅದಕ್ಕೆ ಕಾರಣ ನಮ್ಮ ಸಂಸ್ಕಾರ. ವಿದ್ಯಾರ್ಥಿಗಳಿಗೆ ಸಾಮಾಜಿಕ ಬದ್ಧತೆ ಇರಬೇಕು. ವಿಶ್ವಮಾನವ ತತ್ವದಲ್ಲಿ ನಾವು ಬದುಕಬೇಕು. ಸಾವಿರಾರು ವರ್ಷಗಳ ಹಿಂದೆಯೇ ಉಪನಿಷತ್ ಅದನ್ನು ಹೇಳಿದೆ” ಎಂದರು.

ಶ್ರೀ ಡಾ.ಪ್ರಕಾಶನಾಥ ಸ್ವಾಮೀಜಿ, (ವ್ಯವಸ್ಥಾಪಕ ನಿರ್ದೇಶಕರು, SJB ಮತ್ತು BGS ಸಮೂಹ ಸಂಸ್ಥೆ) ಶ್ರೀಮತಿ ಪೌಲಮಿ ಘೋಷ್  ಮ್ಯಾನೇಜರ್ ಕೇಂಬ್ರಿಡ್ಜ್, ದಕ್ಷಿಣ ಭಾರತ, ಶ್ರೀ ವಿನಯ್ ಗುರೂಜಿ ಹಾಗೂ ಇತರರು ಉಪಸ್ಥಿತರಿದ್ದರು.

Loading

Leave a Reply

Your email address will not be published. Required fields are marked *