ಪಾಕಿಸ್ತಾನದಲ್ಲಿ ಭುಗಿಲೆದ್ದ ಆಕ್ರೋಶ: 200ಕ್ಕೂ ಹೆಚ್ಚು ಇಮ್ರಾನ್ ಖಾನ್ ಬೆಂಬಲಿಗರ ಬಂಧನ

ಇಸ್ಲಾಮಾಬಾದ್: ಮಾಜಿ ಪ್ರಧಾನಿ ಇಮ್ರಾನ್ ಖಾನ್  ತೋಶಖಾನ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ಖಾನ್ ಅವರ 200ಕ್ಕೂ ಹೆಚ್ಚು ಬೆಂಬಲಿಗರನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಪಂಜಾಬ್ನಾದ್ಯಂತ ವಿವಿಧೆಡೆ ಇಮ್ರಾನ್ ಖಾನ್ ಬೆಂಬಲಿಗರನ್ನ ಬಂಧಿಸಿರುವುದಾಗಿ ಪೊಲೀಸರು  ತಿಳಿಸಿದ್ದಾರೆ.
150ಕ್ಕೂ ಹೆಚ್ಚು ಕೇಸ್ಗಳಲ್ಲಿ ವಾಂಟೆಡ್ ಆಗಿರುವ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಲ್ಲಿದ್ದಾಗ ತಮಗೆ ಬಂದ ಉಡುಗೊರೆಗಳನ್ನ ಅಕ್ರಮವಾಗಿ ಮಾರಾಟ ಮಾಡಿಕೊಂಡಿದ್ದಾರೆ ಎಂಬ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯ ಖಾನ್ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿತು.
ಜೊತೆಗೆ 5 ವರ್ಷ ಸಕ್ರಿಯ ರಾಜಕಾರಣದಿಂದಲೂ ಬ್ಯಾನ್ ಮಾಡಿ ಆದೇಶಿಸಿತು. ಆ ನಂತರ ಪೂರ್ವ ಪಂಜಾಬ್ ಪ್ರಾಂತ್ಯದ ಪೊಲೀಸರು ಲಾಹೋರ್ನಲ್ಲಿರುವ ಇಮ್ರಾನ್ ಖಾನ್ ಮನೆಯಲ್ಲೇ ಬಂಧಿಸಿದ್ದರು. ಈ ಬೆಳವಣಿಗೆ ಕಂಡುಬಂದ ಒಂದು ದಿನದ ನಂತರ ಇಮ್ರಾನ್ ಖಾನ್ ಅವ್ರನ್ನ ಪಿಟಿಐ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಯಿತು.
ಪಂಜಾಬ್ ಪೊಲೀಸರ ಪ್ರಕಾರ, ಖಾನ್ ಬಂಧನದ ನಂತರ ಪಂಜಾಬ್ನಾದ್ಯಂತ ಇಮ್ರಾನ್ ಖಾನ್ ಬೆಂಬಲಿಗರು ವ್ಯಾಪಕ ಪ್ರತಿಭಟನೆಗೆ ಮುಂದಾಗಿದ್ದರು. ಆದ್ದರಿಂದ ಪ್ರಾಂತ್ಯದ ವಿವಿಧ ಪ್ರದೇಶಗಳಲ್ಲಿ 200ಕ್ಕೂ ಹೆಚ್ಚು ತೆಹ್ರೀಕ್-ಇ-ಇನ್ಸಾಫ್ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನ ಬಂಧಿಸಲಾಗಿದೆ. ಅವರಲ್ಲಿ 10ಕ್ಕೂ ಹೆಚ್ಚು ಬೆಂಬಲಿಗರ ವಿರುದ್ಧ ಭಯೋತ್ಪಾದನೆ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ. ಖಾನ್ ಬೆಂಬಲಿಗರ ದಾಳಿ ನಡೆಸಿದ ಪೊಲೀಸರು ಶಸ್ತ್ರಾಸ್ತ್ರಗಳನ್ನ ಕಸಿದು ಪ್ರತಿಭಟನೆಯನ್ನ ಹತ್ತಿಕ್ಕಿದ್ದಾರೆ ಎಂದು ತಿಳಿದುಬಂದಿದೆ.

Loading

Leave a Reply

Your email address will not be published. Required fields are marked *