ಬೆಂಗಳೂರು : ಆನೇಕಲ್ ತಾಲ್ಲೂಕಿನ ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ತಿರುಮಗೊಂಡನಹಳ್ಳಿಯ ರಮಣ ಮಹರ್ಷಿ ಪ್ರತಿಷ್ಠಾನದ ವತಿಯಿಂದ ನಡೆಸುತ್ತಿದ್ದ ವೃದ್ಧಾಶ್ರಮದಲ್ಲಿ ಮ್ಯಾನೇಜರ್ ಆಗಿದ್ದ ರಘುವೀರ್ ಶೆಟ್ಟಿ ಎಂಬುವವರು ವೃದ್ಧರು ಟ್ರಸ್ಟ್ಗೆ ನೀಡಿದ ಸುಮಾರು 10.20ಲಕ್ಷ ಹಣವನ್ನು ಲಪಾಟಿಸಿಯಿಸಿಕೊಂಡು ಪರಾರಿಯಾಗಿದ್ದು ಸೂರ್ಯಸಿಟಿ ಪೊಲೀಸ್ ಠಾಣೆಗೆ ಟ್ರಸ್ಟ್ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ದೂರು ನೀಡಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ರಮಣ ಮಹರ್ಷಿ ಆಶ್ರಮದಲ್ಲಿ 60-101 ವರ್ಷ ವಯಸ್ಸಿನ 37 ವೃದ್ಧರು ವಾಸವಾಗಿದ್ದು ಇಲ್ಲಿಯ ನಿವಾಸಿಗಳಾದ ಚೂಡಾಮಣಿ, ಸುಂದರಿ, ಮುನಿರತ್ನಮ್ಮ, ಪ್ರೇಮ ಸೀತಾರಾಮ್, ಶಿವಶಂಕರರೆಡ್ಡಿ ಮತ್ತು ಸೋಮೇಶ್ವರ ರಾವ್ ಅವರು ವೃದ್ಧಾಶ್ರಮಕ್ಕೆ ನೀಡಿದ ಚೆಕ್ ಮತ್ತು ನಗದನ್ನು ಮ್ಯಾನೇಜರ್ ಆಗಿದ್ದ ರಘುವೀರ್ ಶೆಟ್ಟಿ ತನ್ನ ವೈಯಕ್ತಿಕ ಖಾತೆಗೆ ಜಮೆ ಮಾಡಿಕೊಂಡು ಟ್ರಸ್ಟ್ ಮತ್ತು ನಿವಾಸಿಗಳನ್ನು ವಂಚಿಸಿದ್ದಾರೆ.
ಹಾಗಾಗಿ ಇವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಇನ್ನು ಹಣ ಕದ್ದುಪರಾರಿಯಾಗಿರುವ ಆರೋಪ ಹೊತ್ತಿರುವ ರಘುವೀರ್ ಶೆಟ್ಟಿ ನೆರಳೂರು ಸಮೀಪದ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಿದ್ದರು. ಹಣ ಲಪಟಾಯಿಸಿ ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾರೆ.