ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಪಾರ್ಥಿವ ಶರೀರ ನಾಳೆ ಬೆಂಗಳೂರಿಗೆ

ಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ (Spandana) ಅವರ ಮರಣೋತ್ತರ ಪರೀಕ್ಷೆ ಬ್ಯಾಂಕಾಕ್ ನಲ್ಲಿ ಮುಗಿದಿದ್ದು, ಮೃತ ದೇಹವನ್ನು (Dead Body) ನಾಳೆ ಸಾಯಂಕಾಲ ಬೆಂಗಳೂರಿಗೆ ತರಲಾಗುವುದು ಎಂದಿದ್ದಾರೆ ಸ್ಪಂದನಾ ಚಿಕ್ಕಪ್ಪ ಬಿ.ಕೆ. ಹರಿಪ್ರಸಾದ್. ಇಂದು ಮರಣೋತ್ತರ (Postmortem) ಪರೀಕ್ಷೆ ಮುಗಿದಿದ್ದರೂ, ಇನ್ನೂ ಹಲವು ವಿದೇಶಿ ಪ್ರಕ್ರಿಯೆಗಳು ನಡೆಯಬೇಕಿವೆ.ಅವು ನಾಳೆ ಮಧ್ಯಾಹ್ನ ಪೂರ್ಣಗೊಳ್ಳಲಿವೆಯಂತೆ.

‘ಸ್ಪಂದನಾ ಸಾವಿನ ಕುರಿತಂತೆ ಬ್ಯಾಂಕಾಕ್ ಪ್ರಕ್ರಿಯೆಗಳು ಮುಗಿಯಲು ನಾಳೆ ಮಧ್ಯಾಹ್ನ ಆಗುತ್ತದೆ. ಆದ್ದರಿಂದ ಪ್ರಕ್ರಿಯೆಗಳು ಮುಗಿಸಿ ಮೃತದೇಹ ಸಂಜೆ ಹೊರಡಲಾಗುತ್ತದೆ. ರಾತ್ರಿಯ ಒಳಗೆ ಮೃತ ದೇಹ ಬೆಂಗಳೂರಿಗೆ ಬರಲಿದೆ. ಬೆಂಗಳೂರಿನಿಂದ (Bangalore) ಕೆಲವರು ಅಲ್ಲಿಗೆ ಹೋಗೋಣ ಎಂದುಕೊಂಡಿದ್ದೆವು. ಆದ್ರೆ ನಾವು ಹೋಗೋ ಅಷ್ಟರಲ್ಲಿ ಸಮಯ ಆಗುತ್ತೆ. ಆದ್ರಿಂದ ನಾವ್ಯಾರೂ ಇಲ್ಲಿಂದ ಹೋಗ್ತಾ ಇಲ್ಲ. ನಾಳೆ ರಾತ್ರಿ 11:30ರ ಹೊತ್ತಿಗೆ ಮೃತ ದೇಹ ಬರಬಹುದು. ಬುಧವಾರ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ’ ಎಂದಿದ್ದಾರೆ ಹರಿಪ್ರಸಾದ್.

Loading

Leave a Reply

Your email address will not be published. Required fields are marked *