ಗಂಡು ಮಗುವಿಗೆ ಜನ್ಮ ನೀಡಿ ಬಾಲಿವುಡ್ ಬ್ಯೂಟಿ ಇಲಿಯಾನಾ

ಬಾಲಿವುಡ್ ಬ್ಯೂಟಿ ಇಲಿಯಾನಾ ಅವರು ಕೆಲವು ತಿಂಗಳು ಹಿಂದೆ ತಾವು ತಾಯಿಯಾಗುತ್ತಿರುವ ವಿಚಾರವನ್ನ ತಿಳಿಸಿದ್ದರು. ಈಗ ಗಂಡು ಮಗುವಿಗೆ  ನಟಿ ಜನ್ಮ ನೀಡಿದ್ದಾರೆ. ಮುದ್ದಾದ ಮಗುವಿಗೆ ಹೆಸರನ್ನ ಕೂಡ ನಾಮಕರಣ ಮಾಡಿದ್ದಾರೆ. ಕನ್ನಡದ ‘ಹುಡುಗ ಹುಡುಗಿ’ ನಟಿ ಇಲಿಯಾನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಆಗಸ್ಟ್ 1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನ ತಡವಾಗಿ ರಿವೀಲ್ ಮಾಡಿದ್ದಾರೆ.
ಕೋವಾ ಫೀನಕ್ಸ್ ಡೋಲನ್  ಎಂದು ಮಗುವಿಗೆ ಹೆಸರಿಟ್ಟಿದ್ದಾರೆ. ಮಗುವಿನ ಜನನದ ವಿಚಾರ ಹೇಳ್ತಿದ್ದಂತೆ, ಮಗುವಿನ ತಂದೆ ಯಾರು ರಿವೀಲ್ ಮಾಡಿ ಎಂದು ಫ್ಯಾನ್ಸ್ ಬೇಡಿಕೆ ಇಟ್ಟಿದ್ದಾರೆ. ಪದಗಳಲ್ಲಿ ನಮ್ಮ ಸಂತಸವನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಈ ಪ್ರಪಂಚಕ್ಕೆ ನಮ್ಮ ಮಗುವಿನ ಆಗಮನವಾಗಿದೆ. ಅವನಿಗೆ ಸ್ವಾಗತ ಎಂದು ಸಂಭ್ರಮದಿಂದ ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಧ್ಯಾನ್ ಜೊತೆ ಕನ್ನಡದ ಹುಡುಗ-ಹುಡುಗಿ  ಸಿನಿಮಾದಲ್ಲಿ ಇಲಿಯಾನಾ ಸೊಂಟ ಬಳುಕಿಸಿದ್ದರು. ಸೌತ್- ಹಿಂದಿ ಸಿನಿಮಾಗಳ ಮೂಲಕ ಗಮನ ಸೆಳೆದಿರೋ ಈ ಸುಂದರಿ ಏಪ್ರಿಲ್ನಲ್ಲಿ ತಾವು ಪ್ರೆಗ್ನೆಂಟ್ ಎನ್ನುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಲಿಯಾನಾಗೆ ಇನ್ನೂ ಮದುವೆ ಆಗಿಲ್ಲ. ಹೀಗಾಗಿ, ಈ ಮಗುವಿಗೆ ತಂದೆ ಯಾರು ಎನ್ನುವ ಪ್ರಶ್ನೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲ ಮೂಡಿತ್ತು. ಇಷ್ಟು ದಿನ ಮಗುವಿನ ತಂದೆ ಬಗ್ಗೆ ನಟಿ ಗುಟ್ಟಾಗಿ ಇಟ್ಟಿದ್ದರು. ಇತ್ತೀಚಿಗೆ ಬಾಯ್ಫ್ರೆಂಡ್ ಮುಖವನ್ನು ಇಲಿಯಾನಾ ರಿವೀಲ್ ಮಾಡಿದ್ದರು. ಅಚ್ಚರಿ ಎಂದರೆ ಆ ವ್ಯಕ್ತಿಯ ಹೆಸರನ್ನು ಅವರು ಗುಟ್ಟಾಗಿಯೇ ಇಟ್ಟಿದ್ದಾರೆ.
ಸೆಲೆಬ್ರಿಟಿಗಳ ಲೈಫಿನಲ್ಲಿ ಲವ್, ಡೇಟಿಂಗ್, ಬ್ರೇಕಪ್ ಎಲ್ಲವೂ ಸರ್ವೇ ಸಾಮಾನ್ಯ. ಇದರ ಜೊತೆಗೆ ಮದುವೆ ಆಗದೆ ಮಗು ಪಡೆಯೋದು, ಮದುವೆ ಆದ ಕೆಲವೇ ತಿಂಗಳಿಗೆ ತಂದೆ- ತಾಯಿ ಆಗೋದು ಕಾಮನ್. ಇಲಿಯಾನಾ ಕೂಡ ಇದೇ ಸಾಲಿಗೆ ಸೇರುತ್ತಾರೆ. ಈಗ ನಟಿ ಶೇರ್ ಮಾಡಿರುವ ಫೋಟೋದಲ್ಲಿ ಅವರ ಪಕ್ಕ ಓರ್ವ ವ್ಯಕ್ತಿಯೊಬ್ಬರಿದ್ದರು. ಈ ಸ್ಟೇಟಸ್ಗೆ ಡೇಟ್ ನೈಟ್ ಎನ್ನುವ ಅಡಿಬರಹ ನೀಡಿದ್ದರು. ಈ ಮೂಲಕ ಇಷ್ಟು ದಿನ ಗುಟ್ಟಾಗಿ ಇಟ್ಟ ವಿಚಾರ ರಿವೀಲ್ ಮಾಡಿದ್ದರು. ಅವರ ಹೆಸರನ್ನು ನಟಿ ತಿಳಿಸಿಲ್ಲ.

Loading

Leave a Reply

Your email address will not be published. Required fields are marked *