ಬೆಂಗಳೂರು: ಹತ್ತು ರೂಪಾಯಿ ಹಣಕ್ಕಾಗಿ ಮಹಿಳೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ತಿಮ್ಮರಾಯಸ್ವಾಮಿ ರಸ್ತೆ ಸಮೀಪ ನಡೆದಿದೆ . ತಿಮರಾಯಸ್ವಾಮಿ ರಸ್ತೆಯಲ್ಲಿ ವಾಸವಾಗಿರುವ ಮಂಜುಳಾ ಹಲ್ಲೇಗೊಳಗಾದ ಮಹಿಳೆ.. ಇನ್ನು ಈ ಮಹಿಳೆಗೆ ಚಿಲ್ರೆ ಅಂಗಡಿಯಿದ್ದು ನೆನ್ನೆ ಇದೇ ರಸ್ತೆಯಲ್ಲಿ ವಾಸವಾಗಿರುವ ಬಾಬು ಅಲಿಯಾಸ್ ತುಕಾಲಿ ಬಾಬು ಇಬ್ಬರು ನೆನ್ನೆ ಸಂಜೆ ಪಾನ್ ಪರಾಕ್ ಮತ್ತು ವಿಮಲ್ ತೆಗೆದುಕೊಂಡಿದ್ರಂತೆ ಹತ್ತು ರೂಪಾಯಿ ಚೇಂಜ್ ಇಲ್ಲದ ಕಾರಣಕ್ಕೆ ಚಿಲ್ಲರೆ ಅಂಗಡಿಯಲ್ಲಿದ್ದ ಫೋನ್ ಪೇ ನಂಬರಿಗೆ ಹಣ ಕಳಿಸಿದ್ರಂತೆ.
ಬಳಿಕ ಸಂಜೆ ಅಂಗಡಿಯಲ್ಲಿದ್ದ ಮಂಜುಳಾ ನೆನ್ನೆ ನೀವು ಹಾಕಿದ್ದು ದುಡ್ಡು ಬಂದಿಲ್ಲ ಅಂತ ಕೇಳಿದರಂತೆ ಇದೇ ವಿಚಾರಕ್ಕೆ ಅಂಗಡಿಯಲಿದ್ದ 10 ಕೆಜಿ ಗಾಜಿನ ಬಾಟಲ್ ನ್ನ ತೆಗೆದು ತಲೆ ಮೇಲೆ ಹೊಡೆದಿದ್ದಾರೆ ಇನ್ನು ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಮಹಿಳೆಯನ್ನ ಸರ್ಕಾರಿ ಆಸ್ಪತ್ರೆಯಲ್ಲಿ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ .ಇನ್ನು ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸ್ರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ ಆದರೆ ಹಲ್ಲೇಗೋಳಗಾಗಿದ್ದ ಮಹಿಳೆ ಮತ್ತು ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಸಹ ಭಯ ಬೀಳ್ತಿದಾರೆ. ಇನ್ನೂ ಹಲ್ಲೆ ಮಾಡಿದ ವ್ಯಕ್ತಿಗಳು ಪರಾರಿ ಆಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ..