ವರ್ಗಾವಣೆಗೆ ಕಮಿಷನ್ ವಿವಾದ, ರಾಜ್ಯ ಕಾಂಗ್ರೆಸ್ ನಾಯಕರಿಗೆ ವರಿಷ್ಠರ ಕ್ಲಾಸ್

ನವದೆಹಲಿ: ರಾಜ್ಯದಲ್ಲಿಅಭೂತಪೂರ್ವವಾಗಿ ಚುನಾವಣೆ ಗೆಲುವು, ಗ್ಯಾರಂಟಿಗಳ ಯಶಸ್ವಿ ಅನುಷ್ಠಾನದಿಂದ ಬೀಗುತ್ತಿದ್ದ ಕಾಂಗ್ರೆಸ್ ಹೈಕಮಾಂಡ್ ಇದೀಗ ಸರಕಾರದ ಮೇಲಿನ ಭ್ರಷ್ಟಾಚಾರ ಆರೋಪದ ವಿದ್ಯಮಾನಗಳಿಂದ ಸಿಡಿಮಿಡಿಗೊಂಡಿದೆ.
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಪಕ್ಷದ ಸರಕಾರದ ವರ್ಚಸ್ಸು ಮುಕ್ಕಾಗುವ, ಸದಾಭಿಪ್ರಾಯಕ್ಕೆ ಧಕ್ಕೆಯಾಗುವಂತಹ ವಿಚಾರಗಳು ವರಿಷ್ಠರ ಕೋಪ ನೆತ್ತಿಗೇರುವಂತೆ ಮಾಡಿದ್ದು, ಸರಿದಾರಿಯಲ್ಲಿ ಸಾಗುವಂತೆ ರಾಜ್ಯ ನಾಯಕರಿಗೆ ತಾಕೀತು ಮಾಡಿದ್ದಾರೆ.
ವರ್ಗಾವಣೆ ವಿಚಾರದಲ್ಲಿ ಕೇಳಿ ಬಂದ ಲಂಚ ಆರೋಪದ ಹಿನ್ನೆಲೆಯಲ್ಲಿ ಹೈಕಮಾಂಡ್ ಕೆರಳಿದೆ. ಈ ರೀತಿ ಪಕ್ಷ ಹಾಗೂ ಸರಕಾರದ ವರ್ಚಸ್ಸಿಗೆ ಭಂಗ ತರುವ ಯಾವುದೇ ಬೆಳವಣಿಗೆಯನ್ನು ಸಹಿಸಲು ಸಾಧ್ಯವೇ ಇಲ್ಲ. ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತದ ವಾಗ್ದಾನ ಮಾಡಿ ಗೆದ್ದು ಬಂದಿರುವ ಪಕ್ಷವೇ ತನ್ನ ಸರಕಾರದಲ್ಲಿಇಂಥ ಆರೋಪಗಳಿಗೆ ಆಸ್ಪದ ಒದಗಿಸಿದರೆ ಹೇಗೆ? ಭ್ರಷ್ಟಾಚಾರವನ್ನು ಸಹಿಸಲಾಗದು ಎಂದು ರಾಹುಲ್ ಸಿಡಿಮಿಡಿಗೊಂಡಿದ್ದಾರೆ.

ಎಷ್ಟೇ ದೊಡ್ಡವರಾದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಸಚಿವರ ಮೇಲೆ ಇಂಥ ಆರೋಪ ಬಂದರೆ ಸಂಪುಟದಿಂದಲೇ ವಜಾಗೊಳಿಸಬೇಕು. ಈ ವಿಷಯದಲ್ಲಿ ರಾಜೀ ಪ್ರಶ್ನೆಯೇ ಇಲ್ಲವೆಂದು ಹೈಕಮಾಂಡ್ ಪ್ರತಿನಿಧಿಗಳು ಖಡಕ್ ಆಗಿ ಕ್ಲಾಸ್ ತೆಗೆದುಕೊಂಡರು ಎನ್ನಲಾಗಿದೆ.

Loading

Leave a Reply

Your email address will not be published. Required fields are marked *