ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕ ಬಸವರಾಜ ರಾಯರೆಡ್ಡಿ ಬೇಸರಗೊಂಡಿರುವ ಬಗ್ಗೆ ಮಾತನಾಡಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಅವರು ಬಹಳ ಅನುಭವಸ್ಥರು, ಮೇದಾವಿಗಳು, ಬುದ್ದಿವಂತರು. ಕಾಲೇಜು ದಿನಗಳಿಂದ ನಾನು ಅವರನ್ನ ಬಲ್ಲೆ. ಅವರ ಮಾತಿಗೆ ವಿಶ್ಲೇಷನೆ, ವಿವರಣೆಯನ್ನ ಅವರೇ ಹೇಳಬೇಕು. ಅವರು ಯಾವ ಉದ್ದೇಶಕ್ಕೆ ವ್ಯಾಖ್ಯಾನ ಮಾಡುತ್ತಾರೆ ಅಂತ ಹೇಳುವುದು ಕಷ್ಟ. ಅವರು ಬಹಳ ಬುದ್ದಿವಂತರು, ಯಾವ ಸಂದರ್ಭ ಏನೂ ಅಂತ ಅವರೇ ಹೇಳಬೇಕು ಎಂದರು.