ಮಂಗಳೂರು ;- ಕರಾವಳಿಯಲ್ಲಿ ನಮ್ಮ ಪಕ್ಷವೇನು ವೀಕ್ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕರಾವಳಿ ಭಾಗದಲ್ಲಿ ಬದಲಾವಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಕರಾವಳಿಯಲ್ಲಿ ನಾವು ಗೆದ್ದಿಲ್ಲ ಅಂದ ಮಾತ್ರಕ್ಕೆ ಪಕ್ಷ ವೀಕ್ ಆಗಿದೆ. ನಾವು ಶೇಕಡ 42.6ರಷ್ಟು ಮತ ಪಡೆದಿದ್ದೇವೆ. ಬಿಜೆಪಿ ಶೇಕಡ 30ರಷ್ಟು ಮತ ಪಡೆದಿದೆ. 8 ಜಿಲ್ಲೆಗಳಲ್ಲಿ ಬಿಜೆಪಿ ಶೂನ್ಯ ಇದೆ.
ಹಾಗೆಂದು ಅದು ವೀಕ್ ಆಗಿದೆ ಎನ್ನಲು ಆಗುವುದಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಕೆಲವು ಜಿಲ್ಲೆಗಳಲ್ಲಿ ಶಾಸಕರೇ ಇಲ್ಲ. 125 ಇದ್ದವರು 66ಕ್ಕೆ ಇಳಿದಿದ್ದಾರೆ. ಯಾರು ವೀಕ್? ಯಾರು ಸ್ಟ್ರಾಂಗ್? ಎಂದು ಪ್ರಶ್ನಿಸಿದ್ದಾರೆ.