ಭಾರತದ ಗಡಿಯುದ್ದಕ್ಕೂ ಡ್ರಗ್ಸ್ ಪೂರೈಕೆಯನ್ನು ಹೆಚ್ಚಿಸಲು ಡ್ರೋನ್ ಗಳ ಬಳಕೆ: ಪಾಕ್ ಪ್ರಧಾನಿ ಆಪ್ತ

ಇಸ್ಲಾಮಾಬಾದ್: ಪಾಕಿಸ್ತಾನದ   ಪ್ರಧಾನಿ ಶೆಹಬಾಜ್ ಷರೀಫ್  ಅವರ ಪ್ರಮುಖ ಆಪ್ತ ಸಹಾಯಕ ಭಾರತದ ಗಡಿಯುದ್ದಕ್ಕೂ ಡ್ರಗ್ಸ್  ಪೂರೈಕೆಯನ್ನು ಹೆಚ್ಚಿಸಲು ಡ್ರೋನ್ಗಳನ್ನು  ಬಳಸಲಾಗುತ್ತಿರುವುದಾಗಿ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮಿರ್ ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಷರೀಫ್ ಅವರ ರಕ್ಷಣಾ ವಿಶೇಷ ಸಹಾಯಕ ಮಲಿಕ್ ಮೊಹಮ್ಮದ್ ಅಹ್ಮದ್ ಖಾನ್   ಪಾಕಿಸ್ತಾನ-ಭಾರತ ಗಡಿಯ ಬಳಿ ಕಸೂರ್ನ ಪ್ರವಾಹ ಪೀಡಿತ ಪ್ರದೇಶದಲ್ಲಿ ಡ್ರೋನ್ಗಳನ್ನು ಬಳಸಿ ಹೆರಾಯಿನ್ ಅನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ.
ಪ್ರವಾಹ ಸಂತ್ರಸ್ತರ ಪುನರ್ವಸತಿಗಾಗಿ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಲಾಗಿದ್ದು, ಇಲ್ಲದೇ ಹೋದರೆ ಸಂತ್ರಸ್ತರು ಕಳ್ಳಸಾಗಣೆಯಲ್ಲಿ ತೊಡಗಿಕೊಳ್ಳುತ್ತಾರೆ ಎಂದು ತಿಳಿಸಿರುವುದಾಗಿ ಹಮೀದ್ ಮಿರ್ ಜುಲೈ 17ರಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮಿರ್, ಮೊಹಮ್ಮದ್ ಅಹ್ಮದ್ ಖಾನ್ ಅವರು ಕಸೂರ್ನಿಂದ ಎಂಪಿಎ ಆಗಿದ್ದಾರೆ. ಅವರು ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ಸ್ಥಾಪನೆಗೆ ಬಹಳ ಹತ್ತಿರವಾಗಿದ್ದಾರೆ. ಅವರು ಹಿಂದಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಮತ್ತು ಈಗಿನ ಮಿಲಿಟರಿ ಶ್ರೇಣಿಗೆ ತುಂಬಾ ಹತ್ತಿರವಾಗಿದ್ದರು ಎಂದಿದ್ದಾರೆ.

Loading

Leave a Reply

Your email address will not be published. Required fields are marked *