ಕೆಲ ಪೊಲೀಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆಗೆ ತಡೆ ನೀಡಿದ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ನಿನ್ನೆ 211 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನ ವರ್ಗಾವಣೆ ಮಾಡಿ ಆದೇಶ ನೀಡಲಾಗಿತ್ತು. ಆದರೆ ಇಂದು ಬೆಳಗ್ಗೆ ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿ ಆದೇಶ ಮಾಡಿದ್ದ ಸರ್ಕಾರ ಈಗ ತಡೆ ನೀಡಿದೆ. ವರ್ಗಾವಣೆ ಆದೇಶ ಬರ್ತಿದ್ದಂತೆ 11 ಇನ್ಸ್ ಪೆಕ್ಟರ್ ಗಳಿಗೆ ತಡೆ ಭಾಗ್ಯ ನೀಡಲಾಗಿದ್ದು.
ಸರ್ಕಾರ ಆದೇಶ ಮಾಡೋದೇಕೆ ಮತ್ತೆ ತಡೆ ಒಡ್ಡೋದ್ಯಾಕೆ ಎಂದು ಎಲ್ಲರಲ್ಲೂ ಕುತೂಹಲ ಮೂಡಿದೆ.
ನಿನ್ನೆ ಸರ್ಕಾರ 211 ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.ಆದರೆ ಇದೀಗ ಆದೇಶ ಮಾಡಲಾಗಿದ್ದ ಮರುದಿನವೇ ಮತ್ತೊಂದು ಆದೇಶ ಹೊರಬಂದಿತ್ತು. ವರ್ಗಾವಣೆಗೊಂಡ 211 ಸಿಪಿಐಗಳ ಪೈಕಿ 11 ಸಿಪಿಐಗಳ ವರ್ಗಾವಣೆಗೆ ತಡೆ ಹಿಡಿಯಲಾಗಿದೆ. ಇದಕ್ಕೆ ಏನು ಕಾರಣ ಎಂದು ತಿಳಿದುಬಂದಿಲ್ಲ.
ಮಾಗಡಿ ಪೊಲೀಸ್ ಠಾಣೆಯ ಸಿಪಿಐ ರವಿ ಬಿ, ಶಿವಮೊಗ್ಗ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಲಕ್ಷ್ಮಣ ಜೆ, ತೀರ್ಥಹಳ್ಳಿ ಠಾಣೆಯ ಅಶ್ವತ್ಥ ಗೌಡ, ಸಿಐಡಿ ವಿಭಾಗದ ಕೃಷ್ಣ ಕುಮಾರ್ ಪಿಎಸ್, ಗೋವಿಂದ ರಾಜು ಎಂ, ಪುಟ್ಟೇನಹಳ್ಳಿ ಠಾಣೆಯ ರವಿಕಮಾರ್ ಎಚ್ಕೆ, ವಜ್ರಮಣಿ ಕೆ, ಅನಿಲ್ ಕುಮಾರ್ ಎಚ್ಡಿ, ಎಡ್ವಿನ್ ಪ್ರದೀಪ್ ಎಸ್, ಜಗದೀಶ್ ಆರ್ ಹಾಗೂ ಧನಂಜಯ್ ಅವರ ವರ್ಗಾವಣೆ ಆದೇಶವನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ

Loading

Leave a Reply

Your email address will not be published. Required fields are marked *