ಗವಾಸ್ಕರ್ ಅವರು ಟೀಂ ಇಂಡಿಯಾ ಆಟಗಾರರಿಗೆ ಸಹಕರಿಸಲು ಸಿದ್ಧರಿದ್ದಾರೆ: ಕ್ರಿಕೆಟ್ ದಿಗ್ಗಜ ಕಪಿಲ್ ದೇವ್

ದೆಹಲಿ: ಟೀಂ ಇಂಡಿಯಾ ಆಟಗಾರಿಗೆ ಹಣ ಬಲದಿಂದ ಮಂಕು ಕವಿದಿದೆ. ಇದರಿಂದಾಗಿ ಅತಿಯಾದ ಆತ್ಮವಿಶ್ವಾಸ ಅವರಲ್ಲಿ ಮನೆ ಮಾಡಿದೆ. ಇದೇ ಕಾರಣಕ್ಕೆ ಕ್ರಿಕೆಟ್ ದಿಗ್ಗಜರ ಸಲಹೆಯನ್ನು ಪಡೆಯಲು ಅವರು ಮುಂದೆ ಬರುತ್ತಿಲ್ಲ ಎಂದು ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಆಕ್ರೋಶ ಹೊರ ಹಾಕಿದ್ದಾರೆ.
ಗವಾಸ್ಕರ್ ಅವರು ಟೀಂ ಇಂಡಿಯಾ ಆಟಗಾರರಿಗೆ ಸಹಕರಿಸಲು ಸಿದ್ಧರಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ರಂತಹ ಆಟಗಾರರೇ ಗವಾಸ್ಕರ್ ಅವರ ಸಲಹೆಗಳನ್ನು ಪಡೆಯುತ್ತಾರೆ. ಆದರೆ ಈಗಿನ ಯುವ ಆಟಗಾರರು ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಲು ಮುಂದೆ ಬರುತ್ತಿಲ್ಲ ಎಂಬುದು ಬೇಸರದ ವಿಚಾರವಾಗಿದೆ ಎಂದಿದ್ದಾರೆ
ಈಗಿನ ಯುವ ಆಟಗಾರರಲ್ಲಿ ನಾವು ಎಲ್ಲಾ ವಿಚಾರವನ್ನು ತಿಳಿದಿದ್ದೇವೆ ಎಂಬ ಆತ್ಮವಿಶ್ವಾಸದಲ್ಲಿ ಇರುವುದೇ ಇದಕ್ಕೆ ಕಾರಣವಾಗಿದೆ. ಕ್ರಿಕೆಟ್ನ 50 ಸೀಸನ್ಗಳಿಗೆ ಸಾಕ್ಷಿಯಾಗಿರುವ ವ್ಯಕ್ತಿಯಿಂದ ಸಲಹೆಯನ್ನು ಪಡೆಯುವುದು ಉತ್ತಮ ಬೆಳವಣಿಗೆಗೆ ಕಾರಣವಾಗಬಹುದು. ಇದರಿಂದ ಆಟಗಾರರ ದೃಷ್ಟಿಕೋನಗಳನ್ನು ಬದಲಾಯಿಸಲು ಅನುಕೂಲವಾಗಲಿದೆ ಎಂದಿದ್ದಾರೆ.

Loading

Leave a Reply

Your email address will not be published. Required fields are marked *