ಬೆಂಗಳೂರು, (ಜುಲೈ 31): ಬೈಕ್ ಕೀ ವಿಚಾರಕ್ಕೆ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ನಿನ್ನೆ(ಜುಲೈ 31) ರಾತ್ರಿ ಈ ಘಟನೆ ನಡೆದಿದೆ. ಚಾಕುವಿನಿಂದ ಇರಿದು ನೇಪಾಳ ಮೂಲದ ತಿಲಕ್ ಎಂಬಾತನನ್ನು ಸಹೋದ್ಯೋಗಿ ಸಿದ್ದರಾಜು ಹತ್ಯೆ ಮಾಡಿದ್ದಾನೆ. ನೇಪಾಳ ಮೂಲದ ತಿಲಕ್ ಹಾಗೂ ಮಂಡ್ಯ ಮೂಲದ ಸಿದ್ದರಾಜು ಒಂದೇ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಓಡಾಡಲು ಅಂಗಡಿ ಮಾಲೀಕ ಬೈಕ್ ನೀಡಿದ್ದ. ಆದ್ರೆ, ನಿನ್ನೆ ರಾತ್ರಿ ರೂಮ್ನಲ್ಲಿ ಇಬ್ಬರೂ ಮದ್ಯಪಾನ ಮಾಡಿ ಬೈಕ್ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಸಿದ್ದರಾಜು, ತಿಲಕ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಬೈಕ್ ಕೀ ನೀಡುವಂತೆ ತಿಲಕ್ ಬಳಿ ಸಿದ್ದರಾಜು ಕೇಳಿದ್ದಾನೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದ ಗಲಾಟೆಯಾಗಿ ತಿಲಕ್, ಸಿದ್ದರಾಜುಗೆ ಕುಕ್ಕರ್ನಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಸಿದ್ದರಾಜು, ತಿಲಕ್ಗೆ ಚಾಕುವಿನಿಂದ ಚುಚ್ಚಿದ್ದಾನೆ. ಪರಿಣಾಮ ಸಿದ್ದರಾಜು ಮೃತಪಟ್ಟಿದ್ದು, ಬಳಿಕ ಸಿದ್ದರಾಜು ಗಿರಿನಗರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.