ಬೆಂಗಳೂರು ;- ಕೋಟಿ ಬರುತ್ತೆ ಅಂತಾ ಯಾಮಾರಿದ್ರೆ ಅಕೌಂಟ್ ನಲ್ಲಿರೊದೆಲ್ಲ ಲೂಟಿ ಆಗುತ್ತೆ ಹುಷಾರ್. ಆರ್ ಬಿ ಐ ಹೆಸರಲ್ಲಿ ಸೈಬರ್ ಕಳ್ಳರ ಹಾವಳಿ ಶುರುವಾಗಿದೆ.
ನಮ್ಮದಲ್ಲದ ಕಾಂಟ್ರಿ ಕೋಡ್ ಮೊಬೈಲ್ ಸಂಖ್ಯೆಯಿಂದ ಫೇಕ್ ಮೇಸೆಜ್ ಬರುತ್ತಿದೆ. +92 ನಂಬರ್ ಬಳಸಿ ಸೈಬರ್ ಕಳ್ಳರು ಕೈ ಚಳಕ ಶುರು ಮಾಡಿದ್ದಾರೆ.
ಕೋಟಿ ಸಿಕ್ತು ಅಂತಾ ಅವರು ಕೇಳಿದನೆಲ್ಲ ಕೊಟ್ರಿ,ನೀವು ಕೆಟ್ರಿ. ಪ್ರತಿಷ್ಠಿತ ಬ್ಯಾಂಕ್ಗಳ ಹೆಸರಲ್ಲಿ ಫೇಕ್ ಚೆಕ್ಗಳು ಹರಿದಾಡುತ್ತಿವೆ. ಹ್ಯಾಕರ್ಸ್ ಫೋನ್ ಮಾಡಿ ಖಾಸಗಿ ರಿಯಾಲಿಟಿ ಶೋ ಗಳ ಹೆಸರು ಬಳಸಿ ಸುಲಿಗೆ ಇಳಿದಿದ್ದಾರೆ. ವರ್ಚುವಲ್ ನಂಬರ್ ಗಳನ್ನು ಬಳಸಿ ಹ್ಯಾಕರ್ಸ್ಗಳು ಗಿಮಿಕ್ ಮಾಡುತ್ತಿದ್ದಾರೆ.
ಒಂದು ಸಲ ಯಾಮಾರಿ ಬಲೆಗೆ ಬಿದ್ರೆ ಕಾಪಡೋರು ಯಾರು ಇಲ್ಲಾ. ಮೋಸ ಹೋದ್ರೆ ಮೋಸ ಮಾಡಿದೊರ ಸುಳಿವೂ ಸಿಗಲ್ಲ, ಎಲ್ಲಿಂದ, ಯಾರು, ಹೇಗೆ ಹ್ಯಾಕ್ ಮಾಡಿದ್ರು ಎಂಬ ಬಗ್ಗೆ ಯಾರಿಗೂ ತಿಳಿಯುವುದಿಲ್ಲ. ವರ್ಚುವಲ್ ನಂಬರ್ ಗಳು ಆಗಿರೋದ್ರಿಂದ ಅದಕ್ಕೆ ಅಡ್ರೆಸ್ ಇಲ್ಲಾ ಯಾರದ್ದು ಅಂತಾ ಪತ್ತೆ ಹಚ್ಚೊಕು ಆಗಲ್ಲಾ, ಫೇಕ್ ನಂಬರ್ ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೈಬರ್ ಸೆಕ್ಯುರಿಟಿ ಎಕ್ಸ್ಪರ್ಟ್ ಗಳು ಸೂಚನೆ ನೀಡಿದ್ಧಾರೆ.