ಮಂಡ್ಯ;- ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ನಿಯಂತ್ರಣತಪ್ಪಿ ವಿಸಿ ನಾಲೆಗೆ ಕಾರು ಪಲ್ಟಿಯಾಗಿ ನಾಲ್ವರು ಜಲಸಮಾಧಿ ಆಗಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿ ಗ್ರಾಮದ ವಿಸಿ ನಾಲೆಯಲ್ಲಿ ಘಟನೆ ಜರುಗಿದೆ.
ಕಾರಿನಲ್ಲಿದ್ದ ಓರ್ವ ಬಾಲಕಿ ಸೇರಿ ಮೂವರು ಮಹಿಳೆಯರ ಸಾವನ್ನಪ್ಪಿದ್ದಾರೆ.
ಕಾರು ಚಾಲಕ ಮನೋಜ್ ನಿಗೆ ಕೈಕಾಲು ಮುರಿದು ಗಂಭೀರ ಗಾಯವಾಗಿದ್ದು, ಗಾಮನಹಳ್ಳಿಯಿಂದ ದೊಡ್ಡಮುಲಗೂಡು ಗ್ರಾಮಕ್ಕೆ ಹೋಗುವಾಗ ದುರ್ಘಟನೆ ಸಂಭವಿಸಿದೆ.
ಸಂಜನಾ (17) ಮಮತಾ (45)
ಮಹದೇವಮ್ಮ ( 55) ರೇಖಾ (36)
ಮಹದೇವಮ್ಮ ಮೃತ ದುರ್ದೈವಿಗಳು. ಇವರು ಗಾಮನಹಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ.
ಉಳಿದ ಮೂವರು ಮಳವಳ್ಳಿಯ ದೋರನಹಳ್ಳಿ ಗ್ರಾಮದವರು. ಮನೆಯಲ್ಲಿ ದೇವರ ಕಾರ್ಯ ಹಿನ್ನಲೆ ಸಂಬಂಧಿಕರನ್ನ ಕರೆಯಲು ಕುಟುಂಬಸ್ಥರು ತೆರಳುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.
ಇನ್ನೂ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ತಡೆಗೋಡೆ ಇಲ್ಲದಿರುವುದೇ ಘಟನೆಗೆ ಕಾರಣ. ಈ ಹಿಂದೆ ಟ್ರ್ಯಾಕ್ಟರ್ ಬಿದ್ದು ಅವಘಡ ಸಂಭವಿಸಿತ್ತು. ತಡೆಗೋಡೆ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಎಸ್ಪಿ ಎನ್.ಯತೀಶ್, ಭೇಟಿ ಪರಿಶೀಲನೆ ಮಾಡಿದ್ದಾರೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.